ಶಿರಸಿ: ತಾಲೂಕಿನ ದಾಸನಕೊಪ್ಪದಲ್ಲಿ ಇತ್ತೀಚೆಗೆ ನಡೆದ ಬಿಸಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ನರೇಬೈಲ್‌ನ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಾದ 10 ನೇ ವರ್ಗದ ಸಂಭ್ರಮಾ ಹೆಗಡೆ (ಯೋಗ ಮತ್ತು ಚೆಸ್), 9ನೇ ವರ್ಗದ ಸಿಂಚನಾ ಹೆಗಡೆ(ಯೋಗ), ಹಾಗೂ 10ನೇ ವರ್ಗದ ಸುನಿಧಿ ಹೆಗಡೆ (ಯೋಗ) ಸ್ಫರ್ಧೆಗಳಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.
ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಚಂದನ ವಿದ್ಯಾರ್ಥಿಗಳು ಆಯ್ಕೆ
