Slide
Slide
Slide
previous arrow
next arrow

ಸಂಗೊಳ್ಳಿ ರಾಯಣ್ಣನ ನೂತನ ಮೂರ್ತಿ ಮೆರವಣಿಗೆ

300x250 AD

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಸವದತ್ತಿಯಿಂದ ತಂದ ಸಂಗೊಳ್ಳಿ ರಾಯಣ್ಣನ ನೂತನ ಮೂರ್ತಿಯನ್ನು ತಾಲೂಕು ಕುರುಬ ಸಮಾಜದವರು ಮತ್ತು ಸಾರ್ವಜನಿಕರು ಪಟ್ಟಣದ ಮಾರಿಕಾಂಬಾ ದೇವಸ್ಥಾನದಲ್ಲಿ ಗುರುವಾರ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಲ್.ಟಿ.ಪಾಟೀಲ ರಾಯಣ್ಣನ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ವಾದ್ಯದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸನವಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋದರು.

300x250 AD

ಮೆರವಣಿಗೆ ಸಂದರ್ಭದಲ್ಲಿ ಕುರುಬ ಸಮಾಜದ ತಾಲೂಕು ಅಧ್ಯಕ್ಷ ಜಗದೀಶ ಕುರುಬರ, ನಾಗರಾಜ ಗುಬ್ಬಕ್ಕನವರ, ಮಂಜು ಕೋಣನಕೇರಿ, ಪ್ರಕಾಶ ಹುದ್ಲಮನಿ, ಸಂತೋಷ ಸಣ್ಣಮನಿ, ಪ್ರವೀಣ ಹುಲಗೂರ, ಬಸವರಾಜ ಠನಕೆದಾರ, ಪೀರಜ್ಜ ಸಾಗರ, ಶಿವಾನಂದ ಕುರುಬರ, ಸಂತೋಷ ತಳವಾರ, ಅಯ್ಯಪ್ಪ ಭಜಂತ್ರಿ ಸೇರಿದಂತೆ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top