ಶಿರಸಿ :ನಗರದ ಸದ್ಭಾವನಾ ಸಭಾಭವನದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯದಲ್ಲಿಯೂ ಉತ್ಸವ, ಸಂಭ್ರಮ. ರಕ್ಷಾ ಬಂಧನ ಸಪ್ತಾಹದ ಉದ್ಘಾಟನೆ, ಮನ ಮನದಲ್ಲಿ,ಮನೆ ಮನೆಯಲ್ಲಿ ತಿರಂಗಾ ಎನ್ನುವ ಉದ್ಘೋಷಣೆ, ಅಂತರಾಷ್ಟ್ರೀಯ ಯುವ ದಿನ, ಶಿರಸಿಯ 25 ಕ್ಕೂ ಅಧಿಕ ಸಂಘಟನೆಗಳ ಅಧ್ಯಕ್ಷರು, ಪಾಲ್ಗೊಂಡು, ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಬ್ರಹ್ಮಾಕುಮಾರಿ ವೀಣಾಜಿಯವರು ಧ್ವಜದ ಬಣ್ಣಗಳ ಅರ್ಥ ತಿಳಿಸುತ್ತಾ ಕೇಸರಿ ತ್ಯಾಗದ ಸಂಕೇತ, ನಮ್ಮ ದೇಶ ಸುರಕ್ಷಿತವಾಗಿರಲು ಆಲಸ್ಯದ, ಅಹಂಕಾರದ, ತ್ಯಾಗ ಮಾಡಬೇಕು, ಬಿಳಿ ಶಾಂತಿ, ಶುದ್ಧತೆಯ, ಪವಿತ್ರತೆಯ ಪ್ರತೀಕ. ನಮ್ಮೊಳಗಿನ ಶಾಂತಿಯನ್ನು ಅನುಭವ ಮಾಡಬೇಕು. ಅದಕ್ಕಾಗಿ ಈಶ್ವರನ ನೆನಪು ಮಾಡಬೇಕು. ಹಸಿರು ಸಮೃದ್ಧಿಯ ಹಾಗೂ ಪ್ರಕೃತಿಯ ದ್ಯೋತಕ. ಪರಿಸರವನ್ನು ಪ್ರೀತಿಸುವುದರೊಂದಿಗೆ ರಕ್ಷಿಸಬೇಕು. ದೇಶ ಪ್ರೇಮವೆಂದರೆ ನಮ್ಮ ಮೌಲ್ಯಗಳ, ಸದ್ಭಾವನೆಯ ರಕ್ಷಣೆ. ಹೀಗೆ ರಾಷ್ಟ್ರ ಪ್ರೇಮ, ರಕ್ಷಣೆಗಾಗಿ ಈಶ್ವರನ ರಕ್ಷಣೆ ಬೇಕು. ಸೋದರ ಬಾಂಧವ್ಯ ಬೆಳೆಯಬೇಕು. ಪರಸ್ಪರ ಗೌರವ ಉಳಿಯಬೇಕು ಅದಕ್ಕಾಗಿ ಈ ವರ್ಷದ ರಾಖಿ ಕಟ್ಟಿಕೊಂಡು ಸಂಕಲ್ಪ ಮಾಡೋಣ ಎಂದು ತಿಳಿಸಿ ಪ್ರತಿಜ್ಞೆ ಮಾಡಿಸಿದರು.
ಹೆಸ್ಕಾಂ AEE ನಾಗರಾಜ ಪಾಟೀಲ, ಲಯನ್ಸ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ, ರೋಟರಿ ಅಧ್ಯಕ್ಷ ಗಣೇಶ ಹೆಗಡೆ, ಅನಿಲ ಕರಿ, ವಕೀಲರ ಸಂಘದ ಅಧ್ಯಕ್ಷ ಈರೇಶ, ಪ್ರಾಥಮಿಕ ಶಾಲಾಸ ಶಿಕ್ಷಕರ ಸಂಘದ ಸುರೇಶ ಪಟಗಾರ, ಎ.ಪಿ.ಎಮ್.ಸಿ.ಅಧ್ಯಕ್ಷ ಪ್ರಶಾಂತ ಗೌಡರು, ರಕ್ಷಾ ಬಂಧನದ ಕುರಿತು ಮಾತನಾಡಿ ಶುಭ ಹಾರೈಸಿದರು. ಗೌರೇಶ್ವರ ಮಹಿಳಾ ಮಂಡಲ, ಪ್ರೌಢ ಶಾಲಾ ಶಿಕ್ಷಕರ ಸಂಘ,ಬಂಟರ ಸಂಘ,ಗಾಣಿಗರ ಸಮಾಜ, ಪತಂಜಲಿ ಸೇವಾ ಸಮಿತಿ ಸೀನಿಯರ್ ಚೇಂಬರ್, ರಾಜಸ್ಥಾನಿ ಸಮಾಜ ಹಾಗೂ ಇನ್ನೂ ಅನೇಕ ಸಂಘಗಳ ಅದ್ಯಕ್ಷ ರು, ಉಪಾಧ್ಯಕ್ಷ ರು, ಕಾರ್ಯದರ್ಶಿ ಗಳು ಭಾಗವಹಿಸಿ, ತಿರಂಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಎಲ್ಲರೂ ಪವಿತ್ರವಾದ ಶಿವ ರಕ್ಷೆ ರಾಖಿ ಕಟ್ಟಿಸಿಕೊಂಡರು. ಕುಮಾರ ಧೃವ ವಿವೇಕಾನಂದರ ವೇಷಧರಿಸಿ ಪೂರ್ಣ ಕಾರ್ಯಕ್ರಮಕ್ಕೆ ಕಳೆ ತುಂಬಿದನು.