Slide
Slide
Slide
previous arrow
next arrow

ಉತ್ತಮ ಪದ್ಧತಿಗಳ ದಾಖಲೀಕರಣದಲ್ಲಿ ಜಾಲಿ ಪ.ಪಂ.ಪ್ರಥಮ ಸ್ಥಾನ

300x250 AD

ಭಟ್ಕಳ: ಸಿಟಿ ಮ್ಯಾನೇಜರ್ ಅಸೋಸಿಯೇಷನ್ಸ್ ಕರ್ನಾಟಕ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಹಯೋಗದೊಂದಿಗೆ 2020-2021ನೇ ಸಾಲಿನಲ್ಲಿ ಉತ್ತಮ ಪದ್ಧತಿಗಳ ದಾಖಲೀಕರಣದಲ್ಲಿ ಉತ್ತರಕನ್ನಡ ಜಿಲ್ಲೆಗೆ ಇಲ್ಲಿನ ಜಾಲಿ ಪಟ್ಟಣ ಪಂಚಾಯತಿ ಪ್ರಥಮ ಸ್ಥಾನ ಪಡೆದಿದೆ.

ಘನತ್ಯಾಜ್ಯ ವಸ್ತು ವಿಲೇವಾರಿಯಲ್ಲಿ ಬರುವ ಬಟ್ಟೆಗಳನ್ನು ಪಟ್ಟಣ ಪಂಚಾಯತ ಜಾಲಿ ವ್ಯಾಪ್ತಿಯಲ್ಲಿ ಇರುವ ಹೀಲ್ ಎನ್‌ಜಿಒ ಭಟ್ಕಳ ಸಹಯೋಗದೊಂದಿಗೆ ಬಟ್ಟೆಗಳನ್ನು ನವಿಕರಿಸಿ, ಅದನ್ನು ಬಡವರು ಹಾಗೂ ನಿರ್ಗತಿಕರಿಗೆ ದಾನ ಮಾಡುವ ಮೂಲಕ ಒಂದು ಒಳ್ಳೆಯ ಕೆಲಸ ಮಾಡುವದರ ಮೂಲಕ ಮಾದರಿಯಾಗಿದೆ. ಈ ಕುರಿತು ಮಾರ್ಚ್ 2022ರಲ್ಲಿ 2020- 21ನೇ ಸಾಲಿಗೆ ಉತ್ತಮ ಪದ್ಧತಿ ದಾಖಲಾತಿಗೆ ಪ್ರದರ್ಶನವನ್ನು ಪಟ್ಟಣ ಪಂಚಾಯತ ಜಾಲಿ ವತಿಯಿಂದ ಪ್ರದರ್ಶಿದ್ದು, ಸದ್ರಿ ಪ್ರದರ್ಶನಕ್ಕಾಗಿ ಜಾಲಿ ಪಟ್ಟಣ ಪಂಚಾಯತಗೆ ‘ಘನತ್ಯಾಜ್ಯಗಳ ಮರುಬಳಕೆ- ಅಗತ್ಯವಿದ್ದವರಿಗೆ ನೆರವು’- ಉತ್ತಮ ಪದ್ಧತಿಗಳ ದಾಖಲೀಕರಣ ಪ್ರಶಸ್ತಿ ದೊರಕಿದೆ.

300x250 AD

ಗುರುವಾರ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ನಿರ್ದೇಶಕ ಅರ್ಚನಾ ಅವರ ಉಪಸ್ಥಿತಿಯಲ್ಲಿ ವಿಕಾಸಸೌದದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಜಾಲಿ ಮುಖ್ಯಾಧಿಕಾರಿ ರಾಮಚಂದ್ರ ವೇರ್ಣೇಕರ್, ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ ಹಾಗೂ ಶುಭಂ ರಾಯ್ಕರ್, ಈ ಹಿಂದಿನ ಜಿಲ್ಲಾ ನಗರಾಭಿವೃದ್ಧಿ ಪರಿಸರ ಎಂಜಿನಿಯರ್ ಪ್ರಶಸ್ತಿ ಸ್ವೀಕರಿಸಿದರು.

Share This
300x250 AD
300x250 AD
300x250 AD
Back to top