Slide
Slide
Slide
previous arrow
next arrow

ಸ್ವರ್ಣಿಮ ಭಾರತದ ಸ್ಥಾಪನೆಗೆ ಆಧಾರ ‘ರಕ್ಷಾಬಂಧನ’

300x250 AD

eUK ವಿಶೇಷ: ಪುಣ್ಯ ಭೂಮಿಯಾದ ಭಾರತ ದೇಶದಲ್ಲಿ ಆಚರಿಸುವ ರಕ್ಷಾಬಂಧನ ಹಬ್ಬವು ಸೋದರ-ಸೋದರಿಯರ ನಿರ್ಮಲ, ಆತ್ಮೀಯ ಪ್ರೇಮದ ಸೂಚಕವಾಗಿದೆ. ಈ ಸ್ನೇಹಯುಕ್ತ ಪ್ರೇಮದ ಸಂಬಂಧವನ್ನು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಪ್ರೇಮದ ಈ ಮಹಾಮಂತ್ರದಿಂದ ಭಾರತದ ಸುಪುತ್ರನಾದ ವಿವೇಕಾನಂದರು ಅಮೇರಿಕಾ ದೇಶದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ – ‘ನನ್ನ ಸಹೋದರ, ಸಹೋದರಿಯರೇ’ ಎಂದು ಸಂಬೋಧಿಸಿ ವಿಶ್ವದ ಮಾನವಾತ್ಮರನ್ನು ಮಂತ್ರಮುಗ್ದನನ್ನಾಗಿ ಮಾಡಿದರಲ್ಲವೆ ? ಆದರೆ ವರ್ತಮಾನ ಸಮಯದಲ್ಲಿ ಸೋದರ-ಸೋದರಿಯರಲ್ಲಿರುವ ಪವಿತ್ರ ಸಂಬಂಧವು ಕಣ್ಮರೆಯಾಗಿ ನಾರಿಯರ ಜಾತಿ ಬಗ್ಗೆ ಅಗೌರವ, ತಿರಸ್ಕಾರದ ಭಾವನೆಯು ಕಂಡುಬರುವುದು ವಿಷಾದನೀಯ.
ವರ್ತಮಾನ ಕಲಿಯುಗ ತವೋಪ್ರಧಾನವಾದ ಸಮಯದಲ್ಲಿ ಬುದ್ಧಿಯ ಮಲಿನತೆ, ಅಜ್ಞಾನ, ಹಾಗೂ ದುಷ್ಟರ ಸಹವಾಸ ಪ್ರಭಾವದಿಂದ ಮಾನವ ಕಾಮ ಕ್ರೋದಾಧಿ, ದುರ್ಗುಣ, ದುಶ್ಚಟಗಳಿಗೆ ವಶವಾಗಿ, ದೇವರು, ಧರ್ಮ, ನ್ಯಾಯ, ನೀತಿ, ಸತ್ಯತೆ, ಮಾನವೀಯತೆಯನ್ನೇ ಮರೆತುಬಿಟ್ಟಿದ್ದಾನೆ.
ಈಶ್ವರೀಯ ಸಂದೇಶ : ದಯಾಸಾಗರ, ಕರುಣಾಸಾಗರ, ಕ್ಷಮಾಸಾಗರ, ಜ್ಞಾನ ಸಾಗರ, ಸರ್ವಶಕ್ತಿವಂತನಾದ ನಿರಾಕಾರ ಪರಂಜ್ಯೋತಿ ಸ್ವರೂಪನಾದ ಸತ್ಯಂ ಶಿವಂ ಸುಂದರನಾದ ಪರಮಾತ್ಮನು ಈ ಧರೆಗೆ ಅವತರಿಸಿದ್ದಾನೆ. ಸಾಧಾರಣ ಮಾನವ ತನುವಿನ (ಗೀತೆ 9 ಶ್ಲೋಕ 11) ಮೂಲಕ, ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾನೆ. 1937 ರಿಂದ ಈ ಸಂಸ್ಥೆಯಲ್ಲಿ ಲಕ್ಷಾಂತರ ಮಾನವಾತ್ಮರು ಸಹಜ ಜ್ಞಾನ ಹಾಗೂ ಸಹಜ ರಾಜಯೋಗದ ಶಿಕ್ಷಣದ ಮೂಲಕ ಸುಖ ಶಾಂತಿಯ ಜೀವನ ಮಾಡುತ್ತಿದ್ದಾರೆ. ಸತ್ಯಂ ಶಿವಂ ಸುಂದರನಾದ ಪರಮಾತ್ಮನು ಅವನ ಮಹಿಮೆಯಂತೆ ಅವನ ದೃಷ್ಟಿಯಲ್ಲಿ ತಮ್ಮ ಹಾಗೆಯೇ ಮಾನವನನ್ನು ಶ್ರೇಷ್ಠ ಮಾನವನಾಗಿ ಮಾಡಿರಬೇಕಲ್ಲವೇ?
ಭಗವಂತನ ಯತಾರ್ಥವಾದ ಪರಿಚಯ ಪಡೆದು ಏಕಾಗ್ರತೆ ಮೂಲಕ ಮಾನಸಿಕ ಸುಖ ಶಾಂತಿ ಅನುಭವ ಮಾಡಿ ಆನಂದದ ಅನುಭವ ಮಾಡುವುದೇ ಶ್ರೇಷ್ಠ ಪುಣ್ಯ ಕರ್ಮ ಇಂಥ ಪ್ರಭು ಪ್ರೇಮದಲ್ಲಿ ಬಂಧಿತವನ್ನಾಗಿ ಮಾಡುವುದೇ ರಕ್ಷಾಬಂಧನ
ರಕ್ಷಾಬಂಧನದ ಶುಭ ಸಂದೇಶ : ಮಾನವರಾತ್ಮರೆಲ್ಲರೂ ಒಬ್ಬನೇ ನಿರಾಕಾರನಾದ ಪರಮಾತ್ಮನ ಆತ್ಮೀಯ ಸಂತಾನದ ಮಕ್ಕಳು. ಪರಸ್ಪರರಲ್ಲಿ ಸೋದರ – ಸೋದರಿಯರಾಗಿದ್ದಾರೆ. ಈ ಪವಿತ್ರ ಭಾವನೆಯಿಂದ ಜಾತಿ ಮತ, ಪಂಥ ಭೇಧ, ಬಡವ, ಶ್ರಿಮಂತ, ದೂರವಾಗಿ ಈಶ್ವರೀಯ ಪ್ರೇಮ ಹಾಗೂ ಈಶ್ವರಿಯ ಶಕ್ತಿಯ ಅನುಭೂತಿಯಾಗುತ್ತದೆ. ಇದರಿಂದ ಮಾನವನಲ್ಲಿ ಆತ್ಮೀಯ ಪ್ರೇಮ ಸ್ಥಾಪನೆಯಾಗಿ ನಾವೆಲ್ಲರೂ ಒಬ್ಬನೇ ಭಗವಂತನ ಮಕ್ಕಳು ಎಂದು ವ್ಯವಹಾರದಲ್ಲಿ, ಕರ್ಮದಲ್ಲಿ, ವಿಚಾರದಲ್ಲಿ, ಜೀವನದಲ್ಲಿ ಅಳವಡಿಸಿಕೊಂಡರೆ ಆಧ್ಯಾತ್ಮಿಕ ಭೂಮಿ, ಭಾರತ ಭೂಮಿ, ದೇವಭೂಮಿ ಸ್ಥಾಪನೆಯಾಗಿ ಸ್ವರ್ಣಿಮ ಭಾರತವಾಗುವುದು.

ಮಾಹಿತಿ:- ಬ್ರಹ್ಮಕುಮಾರ ಬಲವಂತರಾವ್ ಶಿರಸಿ

300x250 AD
Share This
300x250 AD
300x250 AD
300x250 AD
Back to top