ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ.10 ಬುಧವಾರದಂದು ರೋಟರಿ ಕ್ಲಬ್ ಶಿರಸಿ ಪ್ರಣಿತ ಶ್ರೀ ಸಿದ್ಧಿವಿನಾಯಕ ಇಂಟರಾಕ್ಟ್ ಕ್ಲಬ್ ಇದರ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿಉದ್ಘಾಟಕರಾಗಿ ಆಗಮಿಸಿದ್ದ ಶಿರಸಿ ರೋಟರಿ ಅಧ್ಯಕ್ಷ ಗಣೇಶ ಹೆಗಡೆ ಉದ್ಘಾಟನೆ ನೆರವೇರಿಸಿ ರೋಟರಿಯ ಕುರಿತಾದ ಮಾಹಿತಿ ನೀಡಿದರು ನಂತರದಲ್ಲಿ ನಡೆದ ಶ್ರೀ ಸಿದ್ಧಿವಿನಾಯಕ ಇಂಟರಾಕ್ಟ್ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣವನ್ನು ರೋಟರಿಯ ಹಿರಿಯ ಸದಸ್ಯ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಹೆಗಡೆ ಗಡಿಹಳ್ಳಿ ನಡೆಸಿಕೊಟ್ಟರು. ಕ್ಲಬ್‌ನ ಅಧ್ಯಕ್ಷರಾಗಿ ಕುಮಾರ ಚೈತನ್ಯ ಗಣಪತಿ ಹೆಗಡೆ,ಉಪಾಧ್ಯಕ್ಷರಾಗಿ ಕುಮಾರಿ ಪೂಜಿತಾ ಕೃಷ್ಣಮೂರ್ತಿ ಭಟ್ಟ, ಕಾರ್ಯದರ್ಶಿಯಾಗಿ ಕುಮಾರಿ ಚಿನ್ಮಯಿ ಶ್ರೀಪಾದ ಹೆಗಡೆ, ಖಜಾಂಚಿಯಾಗಿ ಕುಮಾರ ಸಮರ್ಥ ರಾಜಾರಾಮ ಹೆಗಡೆ ಪದಗ್ರಹಣ ಪಡೆದರು.
ಗೋಳಿ ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ
