Slide
Slide
Slide
previous arrow
next arrow

ಕರಡಿ ದಾಳಿ:ಹಣ್ಣು ಆರಿಸಲು ಹೋಗಿದ್ದ ವ್ಯಕ್ತಿ ಮೃತ

300x250 AD

ಶಿರಸಿ: ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕರಡಿ ದಾಳಿಗೆ ತುತ್ತಾಗಿ ರೈತರೊಬ್ಬರು ಮೃತಪಟ್ಟಿದ್ದಾರೆ.

ಸುಂಡಳ್ಳಿ ಗ್ರಾಮದ ಓಂಕಾರ ಪದ್ಮನಾಭ ಜೈನ್ (52) ಮೃತ ರೈತ. ಮನೆಯ ಸಮೀಪದ ಕಾಡಿನಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ.

‘ಚೀರಾಟ ಕೇಳಿ ಕಾಡಿನತ್ತ ಓಡಿದ್ದೆವು. ಕರಡಿಯಿಂದ ಪಾರಾಗಲು ಅವರು ಸಾಕಷ್ಟು ದೂರ ಓಡಿ ಬಂದಿರುವ ಸಾಧ್ಯತೆ ಇದೆ. ರಕ್ಷಣೆಗೆ ಮರ ಏರುವಾಗ ದಾಳಿ ಮಾಡಿದೆ. ಮರದ ಬುಡದಲ್ಲೇ ದೇಹಕ್ಕೆ ಗಂಭೀರ ಗಾಯಗೊಂಡಿದ್ದ ಓಂಕಾರ ಮೃತ ದೇಹ ಇತ್ತು. ಅವರ ದೇಹದ ಮೇಲಾದ ಗಾಯ ಗಮನಿಸಿದಾಗ ಇದು ಕರಡಿ ದಾಳಿ ಎಂಬುದು ಸ್ಪಷ್ಟವಾಯಿತು’ ಎಂದು ಸ್ಥಳೀಯರು ತಿಳಿಸಿದ್ದಾರೆ.

300x250 AD

‘ಮತ್ತಿಘಟ್ಟ ಭಾಗದ ಅರಣ್ಯದಲ್ಲಿ ಕರಡಿಗಳಿದ್ದು ಅದು ಸರಗುಪ್ಪ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ. ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಕಾಡಿನ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ’ ಎಂದು ಜಾನ್ಮನೆ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್ ಪ್ರತಿಕ್ರಿಯಿಸಿದರು.

Share This
300x250 AD
300x250 AD
300x250 AD
Back to top