Slide
Slide
Slide
previous arrow
next arrow

ನರೇಗಾದಲ್ಲಿ ಅವ್ಯವಹಾರ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

300x250 AD

ಕಾರವಾರ: ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿಯಮಬಾಹಿರವಾಗಿ ಬಾವಿಗಳನ್ನು ನಿರ್ಮಿಸಲಾಗಿದ್ದು, ಕರ್ತವ್ಯಲೋಪವೆಸಗಿದವರ ಮೇಲೆ ಕೂಡಲೇ ಕ್ರಮವಾಗಬೇಕು ಎಂದು ಆರ್‌ಟಿಐ ಕಾರ್ಯಕರ್ತ ಮಹಾದೇವ ಗೌಡ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಂಬಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬಾವಿಗಳು ಯೋಜನಾ ನಿಯಮದ ವಿರುದ್ಧವಾಗಿದೆ. ಈಗಾಗಲೇ 14ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಂಡು ಬಾವಿ ನಿರ್ಮಿಸಲಾಗಿದ್ದರೂ ಮತ್ತೆ ನರೇಗಾ ಯೋಜನೆಯ ಅನುದಾನವನ್ನೂ ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ 2015ರಿಂದ 2022ರವರೆಗೆ ನರೇಗಾದಲ್ಲಿ ನಿರ್ಮಾಗೊಂಡ ಬಾವಿಗಳನ್ನು ಪರಿಶೀಲಿಸಿ, ಯೋಜನೆ ನಿಯಮಕ್ಕೆ ವಿರುದ್ಧವಾಗಿದ್ದಲ್ಲಿ ಕರ್ತವ್ಯಲೋಪವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತಿಯ ಒಂಬುಡ್ಸಮನ್ ಅವರಿಗೆ ದೂರು ಸಲ್ಲಿಸಲಾಗಿತ್ತು. ಒಂಬುಡ್ಸಮನ್ ಈ ಬಗ್ಗೆ ದೂರು ದಾಖಲಿಸಿಕೊಂಡು, ಮೇಲ್ನೋಟಕ್ಕೆ ಅವ್ಯವಹಾರ ಆಗಿರುವ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಅವರು ದೂರಿದರು.

300x250 AD

ಅಲ್ಲದೇ ಬೆಳಂಬಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಲ್ಲಿ ನಿರ್ಮಾಗೊಂಡಿದೆ ಎನ್ನಲಾದ ಮೂರು ಸಾರ್ವಜನಿಕ ಕುಡಿಯುವ ನೀರಿನ ಬಾವಿಗಳಿಗೆ ಬೀಗ ಹಾಕಿಡಲಾಗಿದೆ. ಇದರಿಂದಾಗಿ ಸಾರ್ವಜನಿಕ ಆಸ್ತಿ ವೈಯಕ್ತಿಕ ಆಸ್ತಿಯಂತೆ ಮಾರ್ಪಾಟಾಗಿದ್ದು, ಸಕಾರದ ಹಣ ನಿಷ್ಪçಯೋಜಕವಾಗಿದೆ. ಹೀಗಾಗಿ ಈ ಬಾವಿಗಳ ನಿರ್ಮಾಣಕ್ಕೆ ಮಾಡಿದ ವೆಚ್ಚವನ್ನು ಸಂಬಂಧಿಸಿದವರಿಗೆ ವಸೂಲಿ ಮಾಡಿ, ಸರ್ಕಾರಕ್ಕೆ ಭರಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top