Slide
Slide
Slide
previous arrow
next arrow

ಚವಡಳ್ಳಿ- ಮಲವಳ್ಳಿ ಸಹಕಾರಿ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

300x250 AD

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದ ಚವಡಳ್ಳಿ- ಮಲವಳ್ಳಿ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮೌಲಾಲಿಸಾಬ ಪೀರಸಾಬ ನದಾಫ್ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ಯಲ್ಲಪ್ಪ ಬಿಸುಗಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೊದಲನೇ ಅವಧಿಯ ಅಧ್ಯಕ್ಷ ಪರುಷರಾಮ ತಹಶೀಲ್ದಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಭಾನುವಾರ ಚುನಾವಣೆ ನಡೆಸುವಂತೆ ಘೋಷಣೆಯಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮೌಲಾಲಿಸಾಬ ನದಾಫ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ಬಿಸುಗಣ್ಣವರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.

300x250 AD

ಚುನಾವಣಾಧಿಕಾರಿಯಾಗಿ ಸಿಡಿಒ ಶಕ್ತಿಪ್ರಸಾದ ಜಂಭಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಚವಡಳ್ಳಿ-ಮಲವಳ್ಳಿ ಸೊಸೈಟಿ ನಿಕಟಪೂರ್ವ ಅಧ್ಯಕ್ಷ ಪರುಷರಾಮ ತಹಶೀಲ್ದಾರ, ಚವಡಳ್ಳಿ ಪಂಚಾಯತ್ ಅಧ್ಯಕ್ಷ ಮಂಜುನಾಥ ಕಟಗಿ, ಮಾರ್ಕೇಟಿಂಗ ಸೊಸೈಟಿ ಸದಸ್ಯ ಸುನೀಲ ವರ್ಣೇಕರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ.ಪಾಟೀಲ, ಬಿಜೆಪಿ ಜಿಲ್ಲಾ ಸದಸ್ಯ ವೈ.ಪಿ.ಭುಜಂಗಿ, ಪ್ರದೀಪ ಚವ್ಹಾಣ, ಅಬ್ದುಲ್‌ಖಾದರ ಧುಂಡಶಿ, ರಾಮಚಂದ್ರ ರಾಠೋಡ, ಮಹೇಶ ಅರ್ಕಸಾಲಿ, ಪಿ.ಜಿ.ಪಾಟೀಲ, ಗೋಪಾಲ ಪಾಟೀಲ, ರಾಮಣ್ಣ ವಾಲ್ಮೀಕಿ, ಬಸವರಾಜ ಉಗ್ಗಿನಕೇರಿ, ಸೋನು ವರಕ ಸೇರಿದಂತೆ ಚವಡಳ್ಳಿ ಪಂಚಾಯತ್ ಸದಸ್ಯರು ಹಾಗೂ ಸೊಸೈಟಿ ಸದಸ್ಯರು ಇದ್ದರು.

Share This
300x250 AD
300x250 AD
300x250 AD
Back to top