Slide
Slide
Slide
previous arrow
next arrow

ದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿ: ನಾಗರಾಜ ತೊರ್ಕೆ

300x250 AD

ಕುಮಟಾ: ಸಂಕುಚಿತ ಮನೋಭಾವವನ್ನು ತೊರೆದು, ಜಾತಿ, ಮತ, ಧರ್ಮ ಬೇಧವನ್ನು ಮರೆತು, ದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆಹೇಳಿದರು.

ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಕತಗಾಲದ ಎಸ್‌ಕೆಪಿ ಹೈಸ್ಕೂಲಿನಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.

ಉಪನ್ಯಾಸ ನೀಡಿದ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ.ಆರ್.ಭಾರತಿ, ಜ್ಞಾನದಿಂದ ಮಾತ್ರ ಸ್ವಚ್ಛ, ಸದೃಢ, ಸುಂದರ ಭಾರತವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದರು. ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್.ಕೊರವರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಉಪ್ಪಿನಪಟ್ಟಣದ ಶ್ರೀಧರ ಅಂಬಿಗರನ್ನು ಸನ್ಮಾನಿಸಲಾಯಿತು.

300x250 AD

ಕಾರ್ಯಕ್ರಮದಲ್ಲಿ ಶಾಂಭವಿ ಎಚ್.ಅಂಬಿಗ ಪ್ರಾರ್ಥಿಸಿದರು. ಶಿಕ್ಷಕ ಅಶೋಕ ಭಟ್ ಸ್ವಾಗತಿಸಿದರು. ಶಿಕ್ಷಕಿ ಮಂಗಲಾ ಶೆಟ್ಟಿ ವಂದಿಸಿದರು. ನಿಲೇಶ ಎನ್ ಅಂಬಿಗ, ಗೌರೀಶ ಎಮ್ ಅಂಬಿಗ, ಜ್ಯೋತಿ ಎಸ್ ದೇಶಭಂಡಾರಿ ಸಹಕರಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top