ದಾಂಡೇಲಿ: ನಗರದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಎಸ್.ಪ್ರಕಾಶ ಶೆಟ್ಟಿಯವರು ರೋಟರಿ ಕ್ಲಬ್ 3170ರ ಜಿಲ್ಲೆಯ ಉಪ ಪ್ರಾಂತಪಾಲರಾಗಿ ಆಯ್ಕೆಯಾಗಿದ್ದಾರೆ.
ರೋಟರಿ 3170ರ ಇದರ ಮುಖ್ಯ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್.ಪ್ರಕಾಶ ಶೆಟ್ಟಿಯವರನ್ನು ಉಪ ಪ್ರಾಂತಪಾಲರನ್ನಾಗಿ ಆಯ್ಕೆ ಮಾಡಲಾಗಿದೆ. ನಗರದ ಗಣ್ಯರನೇಕರು ಹಾಗೂ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.