• Slide
  Slide
  Slide
  previous arrow
  next arrow
 • ಹೆಗ್ಗರಣಿಯಲ್ಲಿ ಯಂತ್ರಶ್ರೀ ಭತ್ತನಾಟಿ ಪ್ರಾತ್ಯಕ್ಷಿಕೆ

  300x250 AD

  ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೆಗ್ಗರಣೆ ಸಹಕಾರದೊಂದಿಗೆ ಹೆಗ್ಗರಣೆಯ ಈಶ್ವರ ಗೌಡ ಇವರ 2.50 ಎಕರೆ ಹೊಲದಲ್ಲಿ ಕೃಷಿ ಯಾಂತ್ರೀಕರಣದ ಮೂಲಕ ಯಂತ್ರ ಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

  ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಪ್ರಭಾಕರ ನಾಯ್ಕ ಮಾತನಾಡಿ ಆಧುನಿಕ ಪದ್ಧತಿಯಲ್ಲಿ ಭತ್ತಬೇಸಾಯವನ್ನು ಪೂಜ್ಯರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿರುವ ಬಗ್ಗೆ, ಕೃಷಿ ಕೃಷಿಯೇತರ ಚಟುವಟಿಕೆಗಳು ಹಾಗೂ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿನೀಡಿದರು.

  ಕೃಷಿ ಯೋಜನಾಧಿಕಾರಿ ರಾಘವೇಂದ್ರ ಅವರು ಯಾಂತ್ರಿಕತ ಭತ್ತ ಬೇಸಾಯಪ ದ್ಧತಿಯಲ್ಲಿ ರೈತರಿಗಾಗುವ ಲಾಭಗಳು, ಪ್ರಯೋಜನಗಳು ಮತ್ತು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಯಂತ್ರಶ್ರೀ ಮೂಲಕ ಉತ್ತಮ ಬೆಳೆತೆಗೆಯಬಹುದು. ಕೂಲಿಕಾರರ ಸಮಸ್ಯೆಯನ್ನು ದೂರ ಮಾಡಬಹುದು ಎಂದರು.

  300x250 AD

  ಕಾರ್ಯಕ್ರಮದಲ್ಲಿ ಕೃಷಿಇಲಾಖೆಯ ಹೇರೂರು ಭಾಗದ ಕೃಷಿಅಧಿಕಾರಿಯಾದ ಲಷ್ಯಾ, ಒಕ್ಕೂಟದ ಅಧ್ಯಕ್ಷರಾದ ಪ್ರಭಾಕರ ಗೌಡ, ಕೃಷಿ ಮೇಲ್ವಿಚಾರಕ ಮಹಾದೇವ ಬಿ., ಪ್ರಬಂಧಕ ದಿನೇಶ್, ಚಾಲಕರಾದ ಮಹೇಶ್, ಯಂತ್ರಶ್ರೀ ಯೋಧರಾದ ಮಂಜುನಾಥ ಗೌಡ, ಪ್ರಸನ್ನಹೆಗಡೆ, ಎಂಎಸ್.ಹೆಗಡೆ, ಮಹಾಬಲೇಶ್ವರ ನಾಯ್ಕ್, ಸೇವಾಪ್ರತಿನಿಧಿ ರಾಮಗೌಡ, ಪ್ರಗತಿಪರ ಕೃಷಿಕರು, ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top