• Slide
    Slide
    Slide
    previous arrow
    next arrow
  • ವಿವಿಧೆಡೆ ಪ್ರಶಾಂತ ದೇಶಪಾಂಡೆ ಭೇಟಿ; ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ

    300x250 AD

    ಮುಂಡಗೋಡ: ಎರಡು ದಿನಗಳ ಹಿಂದೆ ಪತಿಯಿಂದ ಕೊಲೆಯಾದ ಪಾಳಾ ಗ್ರಾಮದ ಗ್ರಾ.ಪಂ ಸದಸ್ಯೆ ಅಕ್ಕಮ್ಮ ಮೇಲಿನಮನಿಯವರ ಮನೆಗೆ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಶುಕ್ರವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಅನಾಥರಾಗಿರುವ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಹೋಗಿ ಎಂದು ಮಕ್ಕಳ ಚಿಕ್ಕಪ್ಪ ಈರಪ್ಪ ಮೇಲಿನಮನಿಯವರಿಗೆ ಧೈರ್ಯ ತುಂಬಿ ಧನಸಹಾಯ ನೀಡಿದರು. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಾಳಾ ಗ್ರಾಮದಲ್ಲಿ ನಾಸೀರಖಾನ ಪಠಾಣ, ನಿಸಾರ್ ಅಹ್ಮದ್ ಮುಲ್ಲಾ, ಶಂಕರಗೌಡ ದಾನಗೌಡ್ರ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿದರು. ಹಾನಿಗೊಳಗಾದ ಆಯಾ ಮನೆಗಳ ಮಾಲಿಕರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.

    ನಂತರ ಪಟ್ಟಣದ ಕಿಲ್ಲೇ ಓಣಿಯ ಹೂ ವ್ಯಾಪಾರಿ ಖ್ವಾಜ ಮುಜಾವರ ಹೃದಯಾಘಾತದಿಂದ ಇತ್ತೀಚಿಗೆ ಮೃತಪಟ್ಟಿದ್ದ. ಆತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಪಘಾತದಲ್ಲಿ ಕಾಲುಮುರಿತಕ್ಕೆ ಒಳಗಾದ ಹಳೂರ ಓಣಿಯ ಸುಧೀರ ಪಾಟೀಲನ ಮನೆಗೆ ಭೇಟಿ ನೀಡಿ ಧನಸಹಾಯ ನೀಡಿದರು.

    300x250 AD

    ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪಾಟೀಲ, ಪ್ರದೀಪ ಶಿವನಗೌಡ್ರು, ಲಕ್ಷö್ಮಣ ಬನಸೋಡೆ, ನಾಗರಾಜ ಹಂಚಿನಮನಿ, ವಾದಿರಾಜ ಅಡ್ವೆ, ಮಹ್ಮದಖಾನ ನಾಗರೊಳ್ಳಿ, ಈರಪ್ಪ ಮೇಲಿನಮನಿ, ಪಾಳಾ ಗ್ರಾ.ಪಂ ಅಧ್ಯಕ್ಷ ಸೋಮನಗೌಡ ಪಾಟೀಲ, ಮಾಜಿ ಅಧ್ಯಕ್ಷ ಸೋಮಣ್ಣ ಮಟ್ಟಿಮನಿ, ಸಿದ್ದಪ್ಪ ಕ್ಯಾರಕಟ್ಟಿ, ಮಹ್ಮದಗೌಸ ಮಕಾನದಾರ, ಮಹ್ಮದಜಾಫರ ಹಂಡಿ, ಆಸೀಫ ಮಕಾನದಾರ, ಜೈನು ಬೆಂಡಿಗೇರಿ ಸೇರಿದಂತೆ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top