• Slide
  Slide
  Slide
  previous arrow
  next arrow
 • ಶ್ರೀಮಂತನಾದರೂ ಹೃದಯ ದೌರ್ಬಲ್ಯ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ:ಉಮಾಕಾಂತ ಭಟ್ಟ ಕೆರೇಕೈ

  300x250 AD

  ಶಿರಸಿ: ಎಷ್ಟು ದೊಡ್ಡ ದೇಶವಾದರೂ, ಎಷ್ಟು ದೊಡ್ಡ ಶ್ರೀಮಂತನಾದರೂ ಹೃದಯ ದೌರ್ಬಲ್ಯ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.

  ಶುಕ್ರವಾರ ಅವರು ತಾಲೂಕಿನ ಹುಲೆಕಲ್ ನಲ್ಲಿನ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಕೂಡ ಹೃದಯವಂತರನ್ನಾಗಿಸುವಲ್ಲಿ ಪ್ರೇರೇಪಿಸುತ್ತದೆ. ಭಾಷೆ, ಕಲಿಕೆ, ದೇಶದ ಸಂಸ್ಕ್ರತಿ ಮೂಲಕ ಹೃದಯ ಶ್ರೀಮಂತಿಕೆಗೊಳಿಸಿಕೊಳ್ಳಬೇಕು ಎಂದರು.

  ಅಮೇರಿಕಾ ಎಷ್ಟೇ ದೊಡ್ಡದಾದರೂ ಹೃದಯವಂತಿಕೆ ಇಟ್ಟು ಕೊಳ್ಳದೇ ಹೋದರೆ ಪ್ರಯೋಜನ ಇರದು ಎಂದ ಅವರು, ಕಲಿಸುವದು ನೆನಪಿಡಬೇಕಾದ ಶಿಕ್ಷಣದಲ್ಲಿ ಇದ್ದೇವೆ. ಆದರೆ ನೆನಪಿಡಬೇಕಾದ್ದು ಕಲಿಸುವಂತಾಗಬೇಕು.ಬೆಳೆಯುವವನಿಗೆ ನೀನು ಬೆಳೆಯಲು ಹೇಳಲು ಜನ ಬೇಕು. ಕಳೆದುಕೊಳ್ಳುತ್ತಿದ್ದೆವೆ ಎಂದು ಹೇಳುವದೂ ಹಿರಿಯರು ಬೇಕು. ಹಿರಿಯರನ್ನು ಗೌರವಿಸುವದನ್ನು ಕಲಿಯಬೇಕು ಎಂದೂ ಹೇಳಿದರು.

  ಕಳೆದು ಹೋದ ಕಾಲ ಮತ್ತೆ ಸಿಗುವದಿಲ್ಲ. ಶಿಕ್ಷಣ ಎಂದರೆ ಕೇವಲ ಶಾಲೆಯಲ್ಲಿ ಮಾತ್ರವಲ್ಲ. ಜೀವ ನದ ಪ್ರತಿ ಕ್ಷಣವೂ ಶಿಕ್ಷಣವೇ. ಶಿಕ್ಷಣ ಸಂಪದವಾಗಬೇಕು ಎಂದರು. ಓದು ಆಟ ಆಗಬಾರದು. ಮುಂದಿನ ಓದು ಓದುವಾಗ ಹಿಂದಿನದ್ದು ಮರೆಯಬಾರದು. ಮನಸ್ಸನ್ನು ಹಾಗೂ ಮೈಯ್ಯನ್ನು ಹಗುರ ಮಾಡುವ ಕೆಲಸ ಮಾಡಬೇಕು ಎಂದರು.

  300x250 AD

  ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಕಲೆ, ಸಂಸ್ಕೃತಿ, ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ. ಚಿಕ್ಕಂದಿನಿAದಲೇ ಅದನ್ನು ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆಸಂಪೆಕಟ್ಟು ವಹಿಸಿದ್ದರು. ಈ ವೇಳೆ ಉಪಾಧ್ಯಕ್ಷ ಎಂ.ಎಸ್.ಹೆಗಡೆ ಇಟಗುಳಿ, ಕಾರ್ಯದರ್ಶಿ ಹೊಸ್ತೋಟ ಶಾಂತಾರಾಮ ಹೆಗಡೆ, ನಿರ್ದೇಶಕರಾದ ವಿ.ವಿ.ಹೆಗಡೆ ಅತ್ತಿಸರ, ಎಂ.ವಿ.ಹೆಗಡೆ ಅಮಚಿಮನೆ, ಕಲಾವಿದರಾದ ಗಜಾನನ ಭಟ್ಟ ತುಳಗೇರಿ, ಶ್ರೀಪಾದ ಮೂಡಗಾರ ಇತರರು ಇದ್ದರು.

  ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಡಿ.ಆರ್.ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಅಣ್ಣಪ್ಪ ನಾಯ್ಕ ನಿರ್ವಹಿಸಿದರು. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಜಿ.ಎ.ಬಂಟ ವಂದಿಸಿದರು. ಇದೇ ವೇಳೆ ವಿದ್ಯಾವಾಚಸ್ಪತಿ ಸ್ವೀಕರಿಸಿದ ಕೆರೇಕೈ ಅವರನ್ನು ಗೌರವಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top