ಶಿರಸಿ: ಕಳೆದ ಹತ್ತೊಂಬತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಅವರನ್ನು ಕಲಿಕೆಯೆಡೆಗೆ ಉತ್ತೇಜಿಸುತ್ತ ಬಂದಿರುವ ಸಮಾಜ ಸೇವಕ ಉಪೇಂದ್ರ ಪೈ ಅವರು ತಮ್ಮ ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲಯನ್ಸ ಶಾಲೆಗೆ ಕ್ರೀಡಾ ಸಾಮಗ್ರಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಪದವಿ ಪಡೆದು ವಿದೇಶಗಳಲ್ಲಿ ಸೇವೆ ಸಲ್ಲಿಸುವ ಬದಲು ಇದ್ದ ನೆಲದಲ್ಲೇ ಉದ್ಯೋಗ ಸೃಷ್ಟಿಸಿಕೊಂಡು , ಇಳಿವಯಸ್ಸಿನ ತಂದೆ ತಾಯಿಗೆ ನೆರವಾಗುವಂತೆ ಬದುಕಬೇಕು, ನಮಗೆ ಸಿಕ್ಕಿರುವ ಈ ಜನ್ಮದಲ್ಲಿ ಎಲ್ಲರ ಹೃದಯದಲ್ಲಿ ಸ್ಥಾನ ಪಡೆಯುವಂತವರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲಯನ್ ಪ್ರೊ.ರವಿ ನಾಯಕ್ ಉಪೇಂದ್ರ ಪೈ ಅವರ ಸಾಮಾಜಿಕ ಕೊಡುಗೆಯನ್ನು ಶ್ಲಾಘಿಸಿದರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ್ ಹೆಗಡೆ ಸ್ವಾಗತಿಸಿದರು.ಸಹಶಿಕ್ಷಕಿ ಕುಮಾರಿ ಯಶಸ್ವಿನಿ ಹೆಗಡೆ ವಂದನಾರ್ಪಣೆ ಗೈದರು.ಸಹಶಿಕ್ಷಕಿ ಶ್ರೀಮತಿ ಮುಕ್ತ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.