• Slide
    Slide
    Slide
    previous arrow
    next arrow
  • ಬೈಕ್ ರ‍್ಯಾಲಿ ಮೂಲಕ ಪೊಲೀಸರಿಂದ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು

    300x250 AD

    ಭಟ್ಕಳ: ಪಟ್ಟಣದಲ್ಲಿ ಶನಿವಾರ ನಗರ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೈಕ್ ರ‍್ಯಾಲಿ ನಡೆಸುವುದರ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.

    ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು, ಪಟ್ಟಣದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗಳು ಹೆಚ್ಚಾಗುತ್ತಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಗಮನಕ್ಕೆ ತಂದಿದ್ದರು. ಈ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಎಸ್‌ಪಿ ಸೂಚನೆ ನೀಡಿದ್ದು, ಈ ಕಾರಣದಿಂದಾಗಿ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಪಿಐಗಳಾದ ದಿವಾಕರ್ ಹಾಗೂ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಎರಡೂ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ರ‍್ಯಾಲಿ ನಡೆಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಿದರು.

    ಗ್ರಾಮಾಂತರ ಠಾಣೆಯ ಪೊಲೀಸರು ಸಾರದಹೊಳೆಯಿಂದ ಶಿರಾಲಿ ಮಾರ್ಗವಾಗಿ ರ‍್ಯಾಲಿ ಆರಂಭಿಸಿ ಸಂಶುದ್ದಿನ್ ಸರ್ಕಲ್‌ನಿಂದ ತೆಂಗಿನಗುಂಡಿ, ಹೆಬ್ಳೆ, ಗಾಂಧಿನಗರ, ಬೆಳಕೆ ಮೂಲಕ ಪುರವರ್ಗದಲ್ಲಿ ಅಂತ್ಯಗೊಳಿಸಿದರು. ನಗರ ಠಾಣೆಯ ಪೊಲೀಸರು ತೆಂಗಿನಗುಂಡಿ ಸರ್ಕಲ್‌ನಿಂದ ಶಂಸುದ್ದಿನ್ ಸರ್ಕಲ್ ಮಾರ್ಗವಾಗಿ ಬಂದರ್ ರಸ್ತೆಯಿಂದ ನಗರ ವ್ಯಾಪ್ತಿಯಲ್ಲಿ ಬರುವ ಸ್ಥಳಗಲ್ಲಿ ರ‍್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದರು.

    ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಪಿಎಸ್‌ಐಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕುಡಗಂಟಿ, ಭರತ್‌ಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

    300x250 AD

    ಕೋಟ್…

    ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ತ್ರಿಬಲ್ ರೈಡ್ ಮಾಡಬಾರದು. ಬೈಕ್‌ಗೆ ಕರ್ಕಶ ಶಬ್ದದ ಸೈಲೆನ್ಸರ್ ಬಳಸಬಾರದು. ಮೊಬೈಲ್‌ಗಳಲ್ಲಿ ಮಾತಾಡುತ್ತಾ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. 18 ವರ್ಷದೊಳಗಿನ ಮಕ್ಕಳಿಗೆ ಪಾಲಕರು ವಾಹನಗಳನ್ನು ನೀಡಬಾರದು.

    · ಮಹಾಬಲೇಶ್ವರ ನಾಯ್ಕ, ಗ್ರಾಮಾಂತರ ಠಾಣೆಯ ಸಿಪಿಐ

    Share This
    300x250 AD
    300x250 AD
    300x250 AD
    Leaderboard Ad
    Back to top