ಸಿದ್ದಾಪುರ: ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ,ಮಹತ್ವದ ಸೇವೆಗೈದು, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಶಿಕ್ಷಕಿ ಶ್ರೀಮತಿ ಸಾವಿತ್ರಿ ಸುಬ್ರಾಯ್ ಹೆಗಡೆ ತಮ್ಮ ದೀರ್ಘಕಾಲದ ಸೇವೆಯಿಂದ ಜು.31ರಂದು ನಿವೃತ್ತರಾದರು.
ತಮ್ಮ ಶಿಕ್ಷಕ ವೃತ್ತಿಯನ್ನು 1985ರಲ್ಲಿ ಪ್ರಾರಂಭಿಸಿದ ಇವರು ತೀರ್ಥಹಳ್ಳಿ ತಾಲೂಕಿನ ನೊಣಬೂರು ಸ.ಕಿ.ಪ್ರಾ ಶಾಲೆ, ನಂತರ ಉ.ಕ.ಜಿಲ್ಲೆಯ ಕರ್ಜಗಿ, ಬರೂರು, ನಾರಾಯಣಗುರು ನಗರ ಶಾಲೆಗಳಲ್ಲಿ ಸೇವೆ ನೀಡಿ 2014ರಲ್ಲಿ ಮುಂಬಡ್ತಿ ಪಡೆದು ಸಿದ್ದಾಪುರ ತಾಲೂಕಿನ ಹೂಡ್ಲಮನೆ ಸ.ಹಿ.ಪ್ರಾ.ಶಾಲೆಯ ಮುಖ್ಯಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. 37ವರ್ಷದ ಸುದೀರ್ಘ ಸೇವೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು 2003-04 ರಲ್ಲಿ ಜನ ಮೆಚ್ಚಿದ ಶಿಕ್ಷಕಿ, 2015ರಲ್ಲಿ ಗುಣಾತ್ಮಕ ಶಾಲೆ ಪ್ರಶಸ್ತಿ, 2016ರಲ್ಲಿ ಆದರ್ಶ ಶಾಲೆ ಪ್ರಶಸ್ತಿ, 2017ರಲ್ಲಿ ಪರಿಸರ ಮಿತ್ರ ಶಾಲೆ ಹಾಗೂ ಸ್ವಚ್ಛ ವಿದ್ಯಾಲಯ ಪ್ರಶಸ್ತಿ, ಮತ್ತು 2022 ರಲ್ಲಿ ಬೆಸ್ಟ್ ಪ್ರಾಕ್ಟಿಸಿಂಗ್ ಸ್ಕೂಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸುಮಾರು ಏಳು ವರ್ಷ ಏಳು ತಿಂಗಳುಗಳ ಕಾಲ ಸೇವೆ ನೀಡಿ ನಿವೃತ್ತಿಗೊಂಡ ಸ.ಹಿ.ಪ್ರಾ ಶಾಲೆ ಹೂಡ್ಲಮನೆಯ ಮಕ್ಕಳ ಕ್ರೀಡಾ ಮನರಂಜನೆಗಾಗಿ ಶಾಲಾ ಮೈದಾನದಲ್ಲಿ ಸೀಸಾ ಬ್ಯಾಲೆನ್ಸ್ ಹಾಗೂ ಜೋಕಾಲಿಗಳನ್ನು ದೇಣಿಗೆಯಾಗಿ ನೀಡಿರುವುದು ಅವರ ಮಕ್ಕಳ ಮೇಲಿನ ಪ್ರೀತಿ,ಶಾಲೆಯ ಮೇಲಿನ ಅಭಿಮಾನವನ್ನು ಎತ್ತಿ ಹಿಡಿದಂತಿದೆ.
ಅವರ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಶಾಲಾ ಆಡಳಿತ ಮಂಡಳಿ,ಸಹ ಶಿಕ್ಷಕರು,ಊರ ನಾಗರಿಕರು,ಕುಟುಂಬಸ್ಥರು ಹಾರೈಸಿದ್ದಾರೆ.