ಶಿರಸಿ: ಲಯನ್ಸ್ ಕ್ಲಬ್, ಲಿಯೊ ಶಿರಸಿ, ಲಿಯೊ ಶ್ರೀನಿಕೇತನ ಇತರ ಸಂಘಟನೆಗಳಾದ ಸ್ವರ್ಣಶ್ರೀ ಒಕ್ಕೂಟ ವಾನಳ್ಳಿ, ಶ್ರೀ ಲಲಿತಾಂಬಾ ಸ್ವಸಹಾಯ ಸಂಘ ಆರೇಕಟ್ಟ ಮತ್ತು ಶ್ರೀಮಾತಾ ಸ್ವಸಹಾಯ ಸಂಘ ಗೋಪಿನಮರಿ ಸಹಯೋಗದಲ್ಲಿ ಗಣಪತಿ ಹೆಗಡೆ ಮಂಡೆಮನೆಯವರ ಬೆಟ್ಟ ಜಾಗದಲ್ಲಿ ಸಸಿನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಹುಲೇಕಲ್ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಹೆಬ್ಬಾರ ಮಾತನಾಡಿ , ಸಂಪದ್ಭರಿತವಾದ ಮಲೆನಾಡಲ್ಲಿ ಹುಟ್ಟಿದ ನಾವು ಭಾಗ್ಯವಂತರು, ಪರಿಸರವನ್ನು ರಕ್ಷಿಸಿ, ಬೆಳೆಸುವ ಕಾರ್ಯವನ್ನು ಮಾಡೋಣ ಎಂದು ಹೇಳಿ, ಲಿಯೋ ಮಕ್ಕಳನ್ನು ಕರೆತಂದು ಅವರಿಗೆ ಬೇಕಾದ ಮಾಹಿತಿ, ಸಂಸ್ಕಾರವನ್ನು ನೀಡಿ ಅವರಿಂದ ಸಸಿ ನೆಡೆಸಿದ್ದಕ್ಕಾಗಿ ಲಯನ್ಸ್ ಕ್ಲಬ್ ನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಎಮ್.ಜಿ.ಎಫ್ ಲಯನ್ ತ್ರಿವಿಕ್ರಮ ಪಟವರ್ಧನರು, ನಾವು ಬಳುವಳಿಯಾಗಿ ಪಡೆದ ಈ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಪಡೆದದ್ದಕ್ಕಿಂತ ಇನ್ನೂ ಹೆಚ್ಚು ಸಂಪದ್ಭರಿತವಾಗಿ ಬಿಟ್ಟುಕೊಡಬೇಕು ಎಂದು ಹೇಳಿದರು. ರೀಜನ್ ಚೆರ್ ಪರ್ಸನ್ ಎಂ.ಜೆ.ಎಫ್.ಲಿನ್ ಜ್ಯೋತಿ ಭಟ್,ಕಾರ್ಯದರ್ಶಿ ಎಂ.ಜೆ.ಎಫ್.ಲಯನ್ ರಮಾ ಪಟವರ್ಧನ್,ಖಜಾಂಚಿ ಲಯನ್ ರಾಜಲಕ್ಷ್ಮಿ ಹೆಗಡೆ ಹಾಗು ಎಲ್ಲ ಲಯನ್ ಸದಸ್ಯರು, ಲಿಯೊ ಶಿರಸಿ ಅಧ್ಯಕ್ಷೆ ಅನನ್ಯ ಹೆಗಡೆ ಮತ್ತು ಸದಸ್ಯರು, ಲಿಯೋ ಶ್ರೀನಿಕೇತನ ಅಧ್ಯಕ್ಷ ಹರ್ಷಿತ್ ಭಾಗವತ ಮತ್ತು ಸದಸ್ಯರು. ಸ್ವರ್ಣಶ್ರೀ ಒಕ್ಕೂಟದ ಶ್ರೀಮತಿ ಗೀತಾ ಭಟ್ ಮತ್ತು ಸದಸ್ಯರು, ಶ್ರೀ ಲಲಿತಾಂಬಾ ಸಂಘದ ಅಧ್ಯಕ್ಷೆ ಲಯನ್ ಸುಮಂಗಲ ಹೆಗಡೆ ಮತ್ತು ಸದಸ್ಯರು, ಮುಂಡೇಮನೆ ಸದಸ್ಯರು ಮತ್ತು ಊರ ನಾಗರಿಕರು ಎಲ್ಲರು ಸೇರಿ 112 ಸಸಿಗಳನ್ನು ಅತ್ಯಂತ ಸಂಭ್ರಮದಿಂದ ನೆಟ್ಟರು.