• Slide
    Slide
    Slide
    previous arrow
    next arrow
  • ಸನಾತನ ಸಂಸೃತಿಯ ಅರಿವು ಅಗತ್ಯ: ರಾಘವೇಶ್ವರ ಶ್ರೀ

    300x250 AD

    ಗೋಕರ್ಣ: ಇಂದಿನ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅಭಿರುಚಿ ಇದೆ. ಆದರೆ ಅರಿವು ಇಲ್ಲ. ಈ ಅರಿವನ್ನು ಮೂಡಿಸುವ ಪ್ರಯತ್ನವನ್ನು ‘ಆಯತನ’ ಗ್ರಂಥದ ಕನ್ನಡಾನುವಾದ ಗ್ರಂಥ ಮಾಡಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

    ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಆರ್.ಎಸ್.ಹೆಗಡೆಯವರ ಶತಮಾನಗಳಷ್ಟು ಹಳೆಯ ಆಯತನ ಎಂಬ ಕನ್ನಡಾನುವಾದ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

    ಸನಾತನ ಧರ್ಮದ ಬಗ್ಗೆ ಇಂದಿನ ಸಮಾಜಕ್ಕೆ ಅಭಿರುಚಿ ಇದೆ. ಆದರೆ ಅರಿವು ಇಲ್ಲ. ಕೋಟ್ಯಂತರ ಮಂದಿ ಸಂಸ್ಕೃತಿಪ್ರಿಯರು ಸಮಾಜದಲ್ಲಿ ಇಂದು ಇದ್ದಾರೆ. ಹಿಂದಿನ ತಲೆಮಾರಿಗಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅರಿವು ನಿಡುವ ಪ್ರಯತ್ನವನ್ನು ಈ ಕೃತಿ ಮಾಡಿದೆ ಎಂದು ಬಣ್ಣಿಸಿದರು. ಸಂಸ್ಕಾರಗಳು, ಶೌಚ, ಪೂಜೆ, ಬದುಕಿನ ನಾಲ್ಕು ಅವಸ್ಥೆಗಳು, ವರ್ಣ ವ್ಯವಸ್ಥೆ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡ ಇಡೀ ಭಾರತೀಯ ಸಂಸ್ಕೃತಿಯ ಬಗೆಗೆ ನೋಟ ನೀಡುವ ಪ್ರಯತ್ನ ಈ ಕೃತಿಯ ಮೂಲಕ ಆಗಿದೆ. ನಮ್ಮ ಸಂಸ್ಕೃತಿ- ಸಂಪ್ರದಾಯಗಳನ್ನು ಮತ್ತೆ ಆಚರಿಸುವ ಆಸೆ ನಮಗಿದ್ದರೂ, ಅದನ್ನು ಆರಂಭಿಸುವುದು ಎಲ್ಲಿ ಎಂಬ ಗೊಂದಲ ಮೂಡುತ್ತದೆ. ಇದಕ್ಕೆ ಕೃತಿ ಉತ್ತರವಾಗಿದೆ. ಭಾರತ ಸಂಸ್ಕೃತಿಯ ಸಿಂಧುವನ್ನು ಬಿಂದುವಿನಲ್ಲಿ ನೀಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಿದರು.

    300x250 AD

    ದೇವನಿಗೆ ಜೀವನಲ್ಲಿ ಸ್ಪಷ್ಟವಾದ ಪ್ರೀತಿ ಇದೆ; ಆದರೆ ಜೀವನಿಗೂ ದೇವನ ಬಗ್ಗೆ ಅವ್ಯಕ್ತರೂಪದಲ್ಲಿ ಈ ಪ್ರೀತಿ ಇದೆ. ಇದನ್ನು ಕಂಡುಕೊಳ್ಳಬೇಕಾದರೆ ನಿರಂತರ ಅನ್ವೇಷಣೆ ಅಗತ್ಯ ಎಂದು ಹೇಳಿದರು. ಮಗು ತಾಯಿಯನ್ನು ಹುಡುಕುವ ಹಾಗೆ ಜೀವ- ದೇವನನ್ನು ಹುಡುಕುತ್ತಾನೆ. ಪರಮಾತ್ಮ ಪ್ರೀತಿ ವ್ಯಕ್ತವಾದಾಗ ಆತ ಮಹಾತ್ಮನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೌಮ್ಯಶ್ರೀ, ಈಶಾನ್ ಕೌಂಡಿನ್ಯ, ಕಾವ್ಯಶ್ರೀ ತುಂಗಾಪತಿ ಅವರಿಂದ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top