Slide
Slide
Slide
previous arrow
next arrow

ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಕಾರವಾರಕ್ಕೆ ಭೇಟಿ

300x250 AD

ಕಾರವಾರ: ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಶುಕ್ರವಾರ ನಗರಕ್ಕೆ ಭೇಟಿ ನೀಡಿ ವಿವಿಧೆಡೆ ಪರಿಶೀಲನೆ ನಡೆಸಿದರು.
ಖಾಸಗಿ ಉದ್ಯಮಿಗಳ ಖಾತರಿ ಯೋಜನೆ (ಪಿಇಜಿ)ಯ ಸಿದ್ದರದಲ್ಲಿನ ಗೋಧಾಮು, ಬಾಂಡಿಶಿಟ್ಟದಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಉತ್ತರ ಕನ್ನಡವು ಹೆಚ್ಚಿನ ಅಕ್ಕಿ ವಿತರಣೆಯಾಗುವ ಜಿಲ್ಲೆಯಾಗಿರುವ ಕಾರಣ ಭಾರತೀಯ ಆಹಾರ ನಿಗಮದಿಂದ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳಿಗೆ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂಬ ಮಾಹಿತಿ ಪಡೆದರು.
ಈ ವೇಳೆ ಭಾರತ ಆಹಾರ ನಿಗಮದ ಪ್ರಧಾನ ವ್ಯವಸ್ಥಾಪಕಿ ಕಂಗವಲ್ಲಿ, ರಾಜ್ಯ ಆಹಾರ ಇಲಾಖೆಯ ಕಮಿಷನರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತಹಶೀಲ್ದಾರ್ ಎನ್.ಎಫ್.ನರೋನಾ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top