• Slide
    Slide
    Slide
    previous arrow
    next arrow
  • ಪ್ರವೀಣ ನೆಟ್ಟಾರು ಹತ್ಯೆ: ರೂಪಾಲಿ ಖಂಡನೆ

    300x250 AD

    ಕಾರವಾರ: ಬಿಜೆಪಿ ಯುವ ಮೋರ್ಚಾ ಮುಖಂಡ ಸುಳ್ಯ ತಾಲೂಕಿನ ಪ್ರವೀಣ ನೆಟ್ಟಾರು ಅವರ ಹತ್ಯೆಯನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
    ಇದೊಂದು ಹೇಯ ಕೃತ್ಯ. ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು. ರಾಜ್ಯದಲ್ಲಿ ಇಂಥವರು ತಲೆ ಎತ್ತಲು ಬಿಡಬಾರದು.
    ಇನ್ನುಮುಂದೆ ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ನೀಚ ಕೆಲಸಕ್ಕಿಳಿದ ದುಷ್ಟರು ಹಾಗೂ ಅವರಿಗೆ ಕುಮ್ಮಕ್ಕು ನೀಡುವವರನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಬೇಕು. ನಮ್ಮ ಕಾರ್ಯಕರ್ತರು, ಅಮಾಯಕರಿಗೆ ರಕ್ಷಣೆ ದೊರೆಯಬೇಕು.
    ಈ ಘಟನೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಉಂಟಾಗಿರುವ ನೋವು, ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಈ ಘಟನೆ ನನ್ನನ್ನೂ ವಿಚಲಿತಳಾಗುವಂತೆ ಮಾಡಿದೆ. ಹತ್ಯೆಗೊಳಗಾದ ಪ್ರವೀಣ ನೆಟ್ಟಾರು ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಶಾಸಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top