Slide
Slide
Slide
previous arrow
next arrow

ಶಾಸಕಿ ಮನವಿಗೆ ಸ್ಪಂದನೆ; ಕೋಣೆ ಸ್ಟೇಶನ್ ಸಾಮರ್ಥ್ಯ ಹೆಚ್ಚಳಕ್ಕೆ ಅನುಮತಿ

300x250 AD

ಕಾರವಾರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ದ ನಗರದ ಕೋಣೆ ಸಬ್ ಸ್ಟೇಶನ್ ಸಾಮರ್ಥ್ಯವನ್ನು 33ಕೆ.ವಿ.ಯಿಂದ 110 ಕೆ.ವಿ.ಗೆ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ನಗರದ ವಿದ್ಯುತ್ ಪೂರೈಕೆಯ ಗುಣಮಟ್ಟದಲ್ಲಿ ಹೆಚ್ಚಳ ಉಂಟಾಗಲಿದೆ.
ಕೋಣೆ ಸಬ್ ಸ್ಟೇಶನ್ 33ಕೆ.ವಿ. ಇರುವುದರಿಂದ ನಗರದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದಾಗ ಸ್ಟೇಶನ್ ಮೇಲೆ ಒತ್ತಡ ಉಂಟಾಗಿ ವಿದ್ಯುತ್ ವ್ಯತ್ಯಯ, ಲೋ ವೋಲ್ಟೇಜ್ ಮತ್ತಿತರ ಸಮಸ್ಯೆಗಳು ತಲೆದೋರುತ್ತಿದ್ದವು.
ಇದನ್ನು ಮನಗಂಡ ಶಾಸಕಿ ರೂಪಾಲಿ ಎಸ್.ನಾಯ್ಕ ಇಂಧನ ಸಚಿವ ಸುನೀಲಕುಮಾರ್ ಅವರಿಗೆ ಮನವಿ ನೀಡಿ, ಸಬ್ ಸ್ಟೇಶನ್ ಸಾಮರ್ಥ್ಯವನ್ನು 110 ಕೆ.ವಿ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಕೋಣೆ ಸ್ಟೇಶನ್ ಸಾಮರ್ಥ್ಯ ಹೆಚ್ಚಳಕ್ಕೆ ಆದೇಶಿಸಿದ್ದರು.
ಕೋಣೆ ಸಬ್ ಸ್ಟೇಶನ್ ಸಾಮರ್ಥ್ಯ 110 ಕೆ.ವಿ.ಗೆ ಹೆಚ್ಚಳವಾದ ಮೇಲೆ ನಗರದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಯಾವುದೆ ಸಮಸ್ಯೆ ಉಂಟಾಗಲಾರದು. ನಗರಲ್ಲಿ ಇನ್ನಷ್ಟು ಕಟ್ಟಡಗಳು, ಅಪಾರ್ಟಮೆಂಟ್, ಅಂಗಡಿ ಮಳಿಗೆಗಳು ನಿರ್ಮಾಣವಾದರೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಲಿದೆ. 110 ಕೆ.ವಿ.ಗೆ ಸ್ಟೇಶನ್ ಸಾಮರ್ಥ್ಯ ಹೆಚ್ಚಳ ಮಾಡಿರುವುದು ಭವಿಷ್ಯದ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ವಿದ್ಯುತ್ ವ್ಯತ್ಯಯದ ಪ್ರಮಾಣ ಶೇ 90ರಷ್ಟು ಕಡಿಮೆಯಾಗಲಿದೆ.

ಕೋಟ್…
ಕಾರವಾರ ನಗರದ ಬೆಳವಣಿಗೆ ಹಾಗೂ ಯಾವುದೆ ವ್ಯತ್ಯಯ ಇಲ್ಲದೆ ವಿದ್ಯುತ್ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಕೋಣೆ ಸ್ಟೇಶನ್ ಸಾಮರ್ಥ್ಯವನ್ನು ಈಗಿರುವ 33 ಕೆ.ವಿ.ಯಿಂದ 110 ಕೆ.ವಿ.ಗೆ ಹೆಚ್ಚಳ ಮಾಡುವಂತೆ ವಿನಂತಿಸಿದ್ದೆ. ಅದಕ್ಕೆ ಸಮ್ಮತಿ ದೊರೆತಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಅನುಮತಿ ನೀಡಿದ ಸರ್ಕಾರ, ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದಗಳು.
• ರೂಪಾಲಿ ಎಸ್.ನಾಯ್ಕ, ಶಾಸಕಿ

300x250 AD
Share This
300x250 AD
300x250 AD
300x250 AD
Back to top