• Slide
  Slide
  Slide
  previous arrow
  next arrow
 • ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

  300x250 AD

  ಸಿದ್ದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ ನೆಟ್ಟಾರ್ ಹಂತ್ಯೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.ಈ ರೀತಿ ಯುವಕರ ಹತ್ಯೆ ನಡೆಯುತ್ತಿರುವುದಕ್ಕೆ ನೇರ ಕಾರಣ ಬಿಜೆಪಿಯ ಬೇಜವಾಬ್ದಾರಿ ಸರ್ಕಾರ. ಈ ನಿಟ್ಟಿನಲ್ಲಿ ತಾವು ಈ ಬೇಜವ್ದಾರಿ ಬಿಜೆಪಿ ಸರ್ಕಾರವನ್ನು ವಿಸರ್ಜಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಜನಸಾಮಾನ್ಯರಿಗೆ ರಕ್ಷಣೆ ಒದಗಿಸಿಬೇಕು ಎಂದು ರಾಜ್ಯಪಾಲರಿಗೆ ತಹಶೀಲ್ದಾರ ಮೂಲಕ ಮನವಿ ಮಾಡಿದರು.
  ಮನವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಯುವಕ ಪ್ರವೀಣ್ ನೆಟ್ಟಾರು ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ರಾಜ್ಯದಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಯುವಕರ ಹತ್ಯೆ ದಿನೇ ದಿನೇ ಹೆಚ್ಚುತ್ತಲೆ ಇದೆ. ಯಾವೊಬ್ಬ ಜನಸಾಮಾನ್ಯನಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ರೀತಿ ಸಾಲು ಸಾಲು ಪ್ರಕರಣಗಳು ಹೆಚ್ಚುತ್ತಲೇ ಇದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ರಾಜಕೀಯ ಮಾಡುತಿದ್ದಾರೆ ಎಂದು ಆರೋಪಿಸಿದ್ದಾರೆ.
  ಈ ರೀತಿ ಯುವಕರ ಹತ್ಯೆ ನಡೆಯುತ್ತಿರುವುದಕ್ಕೆ ನೇರ ಕಾರಣ ಬಿಜೆಪಿಯ ಬೇಜವಬ್ದಾರಿ ಸರ್ಕಾರ. ಈ ನಿಟ್ಟಿನಲ್ಲಿ ತಾವು ಈ ಬೇಜವ್ದಾರಿ ಬಿಜೆಪಿ ಸರ್ಕಾರವನ್ನು ವಿಸರ್ಜಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಜನಸಾಮಾನ್ಯರಿಗೆ ರಕ್ಷಣೆ ಒದಗಿಸಿ.ರಾಜ್ಯದಲ್ಲಿ ಕಾನೂನಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಹಂತಕರನ್ನು ಬಂಧಿಸಿ ತಕ್ಷಣ ಅವರಿಗೆ ಮರಣದಂಡನೆಯನ್ನು ವಿಧಿಸುವಂತಾಗಬೇಕು.ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರವೀಣ್ ನೆಟ್ಟಾರು ಹತ್ಯೆಯ ಹಂತಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ತಮ್ಮಲ್ಲಿ ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ತಿಳೀಸಿದ್ದಾರೆ.
  ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಳ್ದಾರ ಕಚೇರಿಗೆ ತೆರಳೀ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್.ನಾಯ್ಕ, ಉಪಾಧ್ಯಕ್ಷರಾ ತಾ.ಪಂ ನಿಕಟಪೂರ್ವ ಸದಸ್ಯ ನಾಸೀರ್ ಖಾನ್, ತಾಲೂಕ ಯುವ ಅಧ್ಯಕ್ಷ ಪ್ರಶಾಂತ ನಾಯ್ಕ ಹೊಸೂರು, ಪ್ರಮುಖರಾದ ಎಚ್.ಕೆ.ಶಿವಾನಂದ ಮಾತನಾಡಿದರು. ಈಲ್ಲಾ ಪಂಚಾಯತ ಮಾಜಿ ಸದಸ್ಯರುಗಳಾದ ವಿ.ಎನ್.ನಾಯ್ಕ ಬೇಡ್ಕಣಿ, ಇಂದಿರಾ ಜಿ.ನಾಯ್ಕ, ಡಿ.ಸಿ.ಸಿ ಕಾರ್ಯದರ್ಶಿ ಸಾವೇರ್ ಡಿ, ಸೀಲ್ವಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ಕೋಲಶಿರ್ಸಿ, ಪ್ರಧಾನ ಕಾರ್ಯದರ್ಶಿ ಮುನಾವರ್ ಗಯರಕಾರ್, ತಾಲೂಕು ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ ಕಲ್ಮನೆ, ಸೇವಾದಳದ ಅಧ್ಯಕ್ಷ ಗಾಂಧೀಜಿ ಆರ್.ನಾಯ್ಕ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಗಂಗಾಧರ ಮಡಿವಾಳ ಕಡಕೇರಿ, ಇಂಟೆಕ್ ತಾಲೂಕ ಅಧ್ಯಕ್ಷ ರಾಮಕೃಷ್ಣ ನಾಯ್ಕ ಶಿರೂರು,ಪ್ರಮುಖರಾದ ಮಾರುತಿ ಕೀಂದ್ರಿ, ಚಂದ್ರು ಕಾನಡೆ, ಸುರೇದ್ರ ಗೌಡ,ಬಾಬು ನಾಯ್ಕ ಕಡಕೇರಿ, ಚಂದ್ರಕಾಂತ ನಾಯ್ಕ ಕಲ್ಲೂರು, ಕೆ.ಟಿ.ಹೊನ್ನೆಗುಮಡಿ ಮೊದಲಾದವರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top