ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಮಾನವ ಸಂಸಾಧನ ವಿಕಾಸ ಮಂತ್ರಾಲಯ ನಡೆಸಿದ ರಾಷ್ಟ್ರೀಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ಎರಡನೇ ತರಗತಿಯ ವಿದ್ಯಾರ್ಥಿಗಳಾದ ಪಾರ್ಥ ಹೆಗಡೆ, ಬಿ.ಆರ್.ಚಿರಂತ್, ಪ್ರಭಂಜನ್ ಹೆಗಡೆ, ಮೂರನೇ ತರಗತಿಯ ವಿದ್ಯಾರ್ಥಿಗಳಾದ ಚೇತಸ್ ಹೆಗಡೆ, ವಿಧಾತ್ರಿ, ನೇಸರಾ ಹೆಗಡೆ, ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಪ್ರಾರ್ಥನಾ ಜಿ. ಹೆಗಡೆ, ಐದನೇತರಗತಿಯ ವಿದ್ಯಾರ್ಥಿನಿ ಪ್ರಗತಿ ಸೀತಾರಾಮ ಭಟ್, ಆರನೇ ತರಗತಿಯ ವಿದ್ಯಾರ್ಥಿನಿ ಎಸ್.ಪಿ.ನಿಸರ್ಗಾ, ಏಳನೇ ತರಗತಿಯ ವಿದ್ಯಾರ್ಥಿ ತರುಣ ಪಿ.ಹೆಬ್ಬಾರ್, ಎಂಟನೇ ತರಗತಿಯ ವಿದ್ಯಾರ್ಥಿ ಶೌರ್ಯ ಎಸ್.ಲೋಖಂಡೆ, ಒಂಭ್ಹತ್ತನೇ ತತರಗತಿಯ ವಿದ್ಯಾರ್ಥಿ ಸುಮಂತ್ ಹೆಗಡೆ, ಹತ್ತನೇತರಗತಿಯ ವಿದ್ಯಾರ್ಥಿನಿ ಅವನಿ ಜಿ.ಎಸ್. ಮೆರಿಟ್ ಪ್ರಮಾಣ ಪತ್ರದೊಂದಿಗೆ ನಗದು ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.