Slide
Slide
Slide
previous arrow
next arrow

ನಾಡಿಗೆ ಬಂದ ಹೆಬ್ಬಾವು ಮರಳಿ ಕಾಡಿಗೆ

300x250 AD

ಕುಮಟಾ: ಕಾಡಿನಿಂದ ನಾಡಿಗೆ ಬಂದ ಹೆಬ್ಬಾವೊಂದನ್ನು ಉರಗ ಪ್ರೇಮಿ ರವೀಂದ್ರ ಭಟ್ಟ ಅವರು ಡಿ.ಜಿ.ಹೆಗಡೆ ಅವರ ಸಹಾಯದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

ಪಟ್ಟಣದ ವಿವೇಕನಗರದ ರಸ್ತೆ ಮೇಲೆ ಮಲಗಿದ್ದ ಹೆಬ್ಬಾವನ್ನು ಕಂಡ ಡಿ.ಜಿ.ಹೆಗಡೆ ತಕ್ಷಣ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದರು. ಸಾರ್ವಜನಿಕರು ಆಗಮಿಸಿದ್ದರಿಂದ ಭಯದಿಂದ ಹೆಬ್ಬಾವು ಜೀಡಿನಲ್ಲಿ ಅವಿತುಕೊಂಡಿತು. ಆನಂತರ ರವೀಂದ್ರ ಭಟ್ಟ ಪತ್ತೆಹಚ್ಚಿ ಸುಮಾರು 2 ಘಂಟೆಗಳ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹಿಡಿದರು. ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ನಂತರ ಆಗಮಿಸಿದ ಅರಣ್ಯ ಇಲಾಖೆಯ ರಾಘವೇಂದ್ರ ಅವರು ಹೆಬ್ಬಾವನ್ನು ತೆಗೆದುಕೊಂಡು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

    ಸಮೀಪವೇ ಅಘನಾಶಿನಿ ನದಿಯಿದ್ದರಿಂದ ಮಳೆ ನೀರಿಗೆ ತೇಲಿಕೊಂಡು ಬರುತ್ತವೆ. ಮಳೆ ಕಡಿಮೆಯಾದ ಮೇಲೆ ದಡಕ್ಕೆ ಸಾಗುತ್ತವೆ. ಈ ಹೆಬ್ಬಾವು 6 ರಿಂದ 8 ತಿಂಗಳ ಮರಿಯಾಗಿದ್ದು, ಸುಮಾರು 10 ಅಡಿ ಉದ್ದವಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದರು.

300x250 AD

   ಹೆಬ್ಬಾವನ್ನು ಹಿಡಿಯಲು ಮಂಜುನಾಥ ಹೆಗಡೆ, ಆದಿತ್ಯ ಹೆಗಡೆ ಸಹಕರಿಸಿದರು.

Share This
300x250 AD
300x250 AD
300x250 AD
Back to top