ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆಯಲ್ಲಿ ಭೌತಶಾಸ್ತ್ರ ಮತ್ತು ವಿದ್ಯುನ್ಮಾನ ವಿಭಾಗ, ಧಾರವಾಡದ ಗೊಂಬೆಮನೆ ಇವರ ಸಹಯೋಗದಲ್ಲಿ ಐನಸ್ಟೀನ್ ಎಂಬ ಏಕ ವ್ಯಕ್ತಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ ಎಚ್ ಆರ್ ಅಮರನಾಥ ಅವರು ನನಗೆ ಇದೇ ವಿದ್ಯಾಲಯ ಜ್ಞಾನ ಸುಧೆ ನೀಡಿದೆ ಹಾಗಿದ್ದಾಗಿಯೂ ಯಾರೂ ಗುರುದಕ್ಷಿಣೆ ಕೇಳಲಿಲ್ಲ.ಹಾಗಾಗಿ ಗುರುದಕ್ಷಿಣೆ ಎಂಬಂತೆ ನಾನು ಈ ನಾಟಕ ಆಯೋಜಿಸುವ ಯೋಚನೆ ಮಾಡಿದೆ.ನಾಟಕ ಒಂದು ಕಲೆ ಆದರೆ ಈ ನಾಟಕ ಕಲೆ ವಿಜ್ಞಾನ ಎರಡು ವಿಷಯವಸ್ತು ಹೊಂದಿದೆ. ವಿಜ್ಞಾನಿ ಮತ್ತು ವಿಜ್ಞಾನ ಎರಡೂ ವಿಷಯ ಹಂದರವನ್ನು ಇದು ಹೊಂದಿದೆ ಎಂದರು.
ಸ್ವಾಗತಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ನಾಟಕಗಳು ಸಾಹಿತ್ಯದ ಅಂಗ.ನಾಟಕಗಳು ಧರ್ಮದಿಂದಲೇ ಬೆಳೆದುಬಂದಿತು.ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಧಾರ್ಮಿಕ ಸಾಹಿತ್ಯಗಳೆ ನಾಟಕಗಳಾಗಿ ಮೂಡಿಬಂದಿವೆ ಎಂದರು.ಪ್ರೊ ಆರ್ ವೈ ಕೋಳೆಕರ್ ವಂದಿಸಿದರು.
ಬರಹಗಾರ ಡಾ ಪ್ರಕಾಶ ಗರುಡ ಇವರ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿತು.ಪವನ್ ದೇಶಪಾಂಡೆ ಅಭಿನಯ ಮನೋಜ್ಞವಾಗಿ ನೆರೆದ ಪ್ರೇಕ್ಷಕರ ಮನ ಗೆದ್ದಿತು.