ಶಿರಸಿ: ನಗರದ ಸತ್ಕಾರ ಹೋಟೆಲಿನ ಸಭಾಭವನದಲ್ಲಿ ಜು.27ರಂದು ನಡೆದ ಶಿರಸಿ ತಾಲೂಕಾ ಬೇಡ ಜಂಗಮ ಸಮಾಜ ಶಿರಸಿ (ಉ.ಕ) ಸಭೆ ಜರುಗಿದ್ದು ಸದರಿ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಬೇಡ ಜಂಗಮ ಸಮಾಜದ ನೂತನ ಜಿಲ್ಲಾಘಟಕದ ಪದಾಧಿಕಾರಿಗಳನ್ನು ಜಿಲ್ಲೆಯ ಸಮಸ್ತ ಬೇಡ ಜಂಗಮ ಸಮಾಜದ ಭಾಂದವರು ಸೇರಿ ನೇಮಕ ಮಾಡಲಾಯಿತು. ಸಮಾಜದ ಹಿರಿಯರಾದ ವೇದಮೂರ್ತಿ, ಮಲ್ಲಿಕಾರ್ಜುನ ಸಿ. ಉಪ್ಪಿನಮಠ, ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಬೇಡ ಜಂಗಮ ಭಾಂದವರ ಒಪ್ಪಿಗೆಯ ಮೇರೆಗೆ ಬಸವರಾಜ ನಂದಿಕೇಶ್ವರ ಮಠ, ದಾಸನಕೊಪ್ಪ ಇವರನ್ನು ಉತ್ತರ ಕನ್ನಡ ಜಿಲ್ಲಾ ಬೇಡ ಜಂಗಮ ಸಮಾಜ ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳನ್ನಾಗಿ ಮುಂಡಗೋಡನಿಂದ ಚನ್ನಬಸಯ್ಯ, ದೊಡ್ಡಯ್ಯ ಹಿರೇಮಠ ಉಗ್ಗಿನಕೇರಿ, ಹಳಿಯಾಳದಿಂದ ಚನ್ನಬಸವೇಶ್ವರ ಚರಂತಿಮಠ, ಯಲ್ಲಾಪುರದಿಂದ ಬಸವರಾಜ ಸಂಗಯ್ಯ ನಂದೂಳ್ಳಿಮಠ, ದಾಂಡೇಲಿಯಿಂದ ಶಂಕ್ರಯ್ಯ ಹಿರೇಮಠ, ಜೊಯಿಡಾದಿಂದ ಶಾಂತವೀರೆಶ ಕಲ್ಮಠ ಸಿದ್ದಾಪುರದಿಂದ ಪರಮೇಶ್ವರಯ್ಯ ಕಾನಳ್ಳಿಮಠ ಹಾಗೂ ಶಿರಸಿಯಿಂದ ಗೋಲಯ್ಯ ಎಸ್ ಹಿರೇಮಠ, ಬನವಾಸಿಯಿಂದ ಸಿದ್ದಯ್ಯ ಹಿರೇಮಠ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಶಿವದೇವ ದೇಸಾಯ ಸ್ವಾಮಿ ಹಳಿಯಾಳ, ಬಸವರಾಜ ಒಶಿಮಠ ಮುಂಡಗೋಡ, ಲಿಂಗರಾಜ ಹಿರೇಮಠ, ಶಾಂತವೀರ ಕಲ್ಮಟ್, ಪರಮೇಶ್ವರ ಕಾನಳ್ಳಿಮಠ, ಶಿವಾನಂದ ದೂಪದಮಠ, ಕಾಡಯ್ಯ ಸ್ಥಾವರಮಠ, ಸಂಗಮನಾಥ ವಿ. ಸಂಬ್ರಗಿಮಠ, ವಾಗಿಶ್ ಹಿರೇಮಠ, ಸಂದೀಪ ಚರಂತಿಮಠ, ರವೀಂದ್ರಹಿರೇಮಠ, ಬಿ.ಜಿ. ಹಿರೇಮಠ, ಚರಣ ಹಿರೇಮಠ, ರತ್ನಮಾಲಾ ಹಿರೇಮಠ ಮುಂತಾದ ಬೇಡ ಜಂಗಮ ಸಮಾಜದ ಪ್ರಮುಖರು ಭಾಗವಹಿಸಿದ್ದರು