• Slide
  Slide
  Slide
  previous arrow
  next arrow
 • ಉತ್ತರ ಕನ್ನಡದ ಜನತೆಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ : ವಸಂತ್ ರೆಡ್ಡಿ

  300x250 AD

  ಶಿರಸಿ : ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆಯಾಗಿದ್ದು ಇಲ್ಲಿನ ಜನತೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಈ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಒಂದು ಭಾಗ್ಯ ಎಂದು ಐ ಎಫ್ ಎಸ್ ಅಧಿಕಾರಿ ವಸಂತ್ ರೆಡ್ಡಿ ಅಭಿಪ್ರಾಯಪಟ್ಟರು.

   ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂ ಎಸ್ ಸಿ ಸಂಯೋಜನೆ ಯಲ್ಲಿ ಸಸ್ಯಶಾಸ್ತ್ರ ಮತ್ತು ಉದ್ಯೋಗ ಮಾರ್ಗದರ್ಶಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜನರು ವೃಕ್ಷವನ್ನು ರಕ್ಷಿಸಿದರೆ ವೃಕ್ಷವು ಜನರನ್ನು ರಕ್ಷಿಸುತ್ತದೆ ಎನ್ನುವ ಉಪನ್ಯಾಸ ಹಾಗೂ ಸನ್ಮಾನ  ಕಾರ್ಯಕ್ರಮದಲ್ಲಿ ಮಾತನಾಡಿದರು .

  ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಅರಣ್ಯವನ್ನು ಹೊಂದಿದ್ದು ಇಲ್ಲಿನ ಜನತೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈ ಜಿಲ್ಲೆಯ ಅರಣ್ಯ ಇಲಾಖೆ ಯಲ್ಲಿ  ಕಾರ್ಯನಿರ್ವಹಿಸುವುದು ನಮ್ಮ ಭಾಗ್ಯ ಎಂದರು.ತಾನು ಕೃಷಿ ಕುಟುಂಬದಿಂದ ಬಂದಿದ್ದು ಕನ್ನಡ ಮಾದ್ಯಮದಲ್ಲಿಯೆ ವ್ಯಾಸಂಗ ಮಾಡಿ ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಭಾರತೀಯ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ . ವಿದ್ಯಾರ್ಥಿಗಳು ಪದವಿಯಿಂದಲೆ  ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು .

  300x250 AD

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಂ ಇ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಮಯಪ್ರಜ್ಞೆ ,ಜಾಗೃತ ಮನಸ್ಸು, ಕಠಿಣ ಪರಿಶ್ರಮ ಮುಖ್ಯವಾಗಿರುತ್ತದೆ .ಕನ್ನಡ ಮಾದ್ಯಮದ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಗುರಿ ತಲುಪಲು ಸಾಧ್ಯ.ಉತ್ತರ ಕನ್ನಡ ಜಿಲ್ಲಯಲ್ಲಿ  ನೆಲ ಜಲ ಸಮೃದ್ಧವಾಗಿದ್ದು, ನಮ್ಮ ಪರಿಸರವನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಮಾಡೋಣ ಎಂದು ಕರೆ ನೀಡಿದರು

  ಕಾರ್ಯಕ್ರಮದಲ್ಲಿ ಆರ್ ಎಫ್ ಓ ಆಗಿ ಆಯ್ಕೆಯಾದ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಸಂದ್ಯಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ, ಅರಣ್ಯ ಇಲಾಖೆಯ ಅಧಿಕಾರಿಗಳಾದ  ಅಶೋಕ್, ಬಸವರಾಜ್ ಉಪಸ್ಥಿತರಿದ್ದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ ಕೆ ಎನ್ ರೆಡ್ಡಿ  ಸ್ವಾಗತಿಸಿದರು. ಗಾಯತ್ರಿ ರೆಡ್ಡಿ ನಿರೂಪಿಸಿದರು. ಹರ್ಷಿನಿ ಪಾವಸ್ಕರ್ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top