Slide
Slide
Slide
previous arrow
next arrow

ಇಸ್ಟೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ

300x250 AD

ಹೊನ್ನಾವರ: ತಾಲೂಕಿನ ಮಾಗೋಡ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಂಥವನ್ನಾಗಿಸಿ ಜೂಜಾಟದಲ್ಲಿ ತೊಡಗಿದ್ದ ಇಸ್ಟೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 4470 ನಗದು 8 ಜನರನ್ನು ವಶಕ್ಕೆ ಪಡೆದು ಏಳು ಬೈಕನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನಲ್ಲಿ ಇಸ್ಪೀಟ್ ಜೂಜಾಟ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದು ಆಗಾಗ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ. ಮಾಗೋಡ ಬಳಿ ಇದೀಗ ಪಿಎಸೈ ಮಹಾಂತೇಶ ನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 4470 ನಗದು ಹಾಗೂ 7 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

300x250 AD

ಜೂಜಾಟದಲ್ಲಿ ತೊಡಗಿದ್ದ ಮಾಗೋಡ ಗ್ರಾಮದ ಶೇಖರ ನಾಯ್ಕ, ಸಂದೇಶ ನಾಯ್ಕ, ದಾಮೋದರ ನಾಯ್ಕ, ಸಂದೇಶ ನಾಯ್ಕ, ಮಹೇಶ ನಾಯ್ಕ, ರಾಜು ನಾಯ್ಕ, ಆನಂದ ನಾಯ್ಕ, ಮಹದೇವ ನಾಯ್ಕ ಅವರನ್ನು ವಶಕ್ಕೆ ಪಡೆದಿದ್ದು, ದತ್ತಾತ್ರೇಯ ನಾಯ್ಕ, ರಮೇಶ ನಾಯ್ಕ, ಮನೋಜ ನಾಯ್ಕ, ಪುರಂದರ ನಾಯ್ಕ ಇವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top