ದಾಂಡೇಲಿ: ಅತಿಯಾದ ವೇಗವಾಗಿ ಬಂದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳನ್ನು ಜಖಂಗೊಳಿಸಿ, ಚರಂಡಿಗೆ ಇಳಿದ ಘಟನೆ ಬುಧವಾರ ನಗರದ ಸೋಮಾನಿ ವೃತ್ತದಿಂದ ಬರ್ಚಿ ರಸ್ತೆಗೆ ಹೋಗುವ ರಸ್ತೆಯಲ್ಲಿ ಬರುವ ತಹಶೀಲ್ದಾರ್ ಕಚೇರಿಯ ಹತ್ತಿರ ನಡೆದಿದೆ.
ನಗರದಿಂದ ಬರ್ಚಿ ರಸ್ತೆ ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನವೊಂದು ವೇಗವಾಗಿ ಬಂದು ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮವಾಗಿ ತಹಶೀಲ್ದಾರ್ ಕಚೇರಿಯ ಹತ್ತಿರ ಅಪಘಾತಕ್ಕೀಡಾಗಿದೆ. ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಕ್ರೂಸರ್ ವಾಹನ ಹಾಯ್ದ ಪರಿಣಾಮವಾಗಿ ಎರಡು ದ್ವಿಚಕ್ರ ವಾಹನಗಳು ಜಕಂಗೊAಡಿವೆ. ಕ್ರೂಸರ್ ವಾಹನ ಬಲಬದಿಯ ಎರಡು ಚಕ್ರಗಳು ಗಟಾರಕ್ಕೆ ಇಳಿದಿವೆ. ಇನ್ನೂ ಅಲ್ಲೆ ಸ್ವಲ್ಪ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರ ಕೈಗೆ ತಾಗಿಸಿ ಕ್ರೂಸರ್ ವಾಹನ ಮುಂದೆ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದೇ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಾಲೆ- ಕಾಲೇಜು ವಿದ್ಯಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿAದ ಆಗಬಹುದಾದ ಅನಾಹುತ ತಪ್ಪಿದಂತಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಪಿಎಸೈ ಕಿರಣ್ ಪಾಟೀಲ, ಎಎಸೈಗಳಾದ ಬಸವರಾಜ ಒಕ್ಕುಂದ ಮತ್ತು ಡಿ.ಟಿ.ರಾಥೋಡ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷö್ಯ ಮತ್ತು ಅತಿ ವೇಗದ ಚಾಲನೆಯೆ ಕಾರಣ ಎನ್ನಲಾಗಿದೆ.