Slide
Slide
Slide
previous arrow
next arrow

ಕಾಮಗಾರಿ ಗುತ್ತಿಗೆ ಹಿನ್ನೆಲೆ :ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘದಿಂದ ತಹಶಿಲ್ದಾರರಿಗೆ ಮನವಿ

300x250 AD

ಯಲ್ಲಾಪುರ;ಪರಿಶಿಷ್ಟ ಜಾತಿಯವರಲ್ಲದವರು ಸರಕಾರಕ್ಕೆ ವಂಚನೆ ಮಾಡಿ ಪರಿಶಿಷ್ಟ ಜಾತಿಯ ಮೀಸಲು ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ,ತಾಲೂಕಾ ಪರಿಶಿಷ್ಟ ಜಾತಿಯ ಸಿವಿಲ್ ಗುತ್ತಿಗೆದಾರ ಸಂಘದ ವತಿಯಿಂದ ಬುಧವಾರ ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ ಅವರಿಗೆ ಮನವಿ ಸಲ್ಲಿಸಿದರು.

ಸಲ್ಲಿಸಿದ ಮನವಿಯಲ್ಲಿ ತಾಲೂಕಿನಲ್ಲಿ ಕೆಲವರು ಪರಿಶಿಷ್ಟರಲ್ಲದಿದ್ದರೂ,ನಾವು ಪರಿಶಿಷ್ಠ ಜಾತಿಯವರೆಂದು  ನೈಜ ಪರಿಶಿಷ್ಟ ರಿಗೆ ಸಂಬಂಧಿಸಿದ ಮೀಸಲು ಬರುವಂತಹ ಕಾಮಗಾರಿಯನ್ನು ಟೆಂಡರ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. 

ಹಳೆಯ ಜಾತಿ ಪ್ರಮಾಣ ಪತ್ರವನ್ನೇ ಬಳಸುತ್ತಿದ್ದು, ವಿದ್ಯುನ್ಮಾನ ಸಹಿ ಹಾಗೂ ಆರ್.ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣಪತ್ರ ಬಳಸದೇ  ರಾಜಾರೋಷವಾಗಿ ದಲಿತರ ಮೀಸಲು ಅನುದಾನದ ಕಾಮಗಾರಿ ನಿರ್ವಹಿಸುತ್ತದ್ದಾರೆ.ಇದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯ ವಾಗುತ್ತಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

300x250 AD

ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗೇಶ ಬೋವಿವಡ್ಡರ್,ಉಪಾಧ್ಯಕ್ಷರಾದ ಪರಶುರಾಮ ಮದನೂರು, ಗೋವಿಂದ ಬಸಾಪುರ,ಕಾರ್ಯದರ್ಶಿ ಮಾರುತಿ ಬೋವಿವಡ್ಡರ್, ಪ್ರಮುಖರಾದ ಅಶೋಕ ಕೊರವರ,ತೋಳರಾಮ ಅತ್ತರವಾಲ,ದ್ಯಾಮಣ್ಣ ಬೋವಿವಡ್ಡರ್, ತಿಮ್ಮಣ್ಣ ಬೋವಿವಡ್ಡರ್, ವಿಶ್ವನಾಥ ಬೋರಕರ್,ಹನುಮಂತ ಕೊರವರ,ಸುರೇಶ್ ಬೋವಿವಡ್ಡರ್, ರವೀಶ ಬೋರಕರ್, ನಾಗರಾಜ ಬೋವಿವಡ್ಡರ್, ಶೇಖಪ್ಪ ಕೊರವರ,ನಾಗೇಶ ವಡ್ಡರ್,ಭರತ ವಡ್ಡರ್,ವೀರೇಂದ್ರ ವಡ್ಡರ್ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top