ಯಲ್ಲಾಪುರ: ತಾಲೂಕಿಗೆ ಸಂಬಂಧಿಸಿದಂತೆ ಸರಕಾರದ ಅಧೀನದಲ್ಲಿ ಬರುವಂತಹ ಪರಿಶಿಷ್ಟ ಜಾತಿಯ ಮೀಸಲು ಇರಿಸುವಂತಹ ವಿವಿಧ ಅನುದಾನದ ಯಾವತ್ತೂ ಕಾಮಗಾರಿಗಳನ್ನು ನಮ್ಮ ಸಂಘದ ಗುತ್ತಿಗೆದಾರರಿಗೆ ನೀಡುವಂತೆ ಮಾಡಬೇಕೆಂದು ತಾಲೂಕಾ ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘ ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.ಸಲ್ಲಿಸಿದ ಮನವಿಯಲ್ಲಿ ಸಂಘದ ಮೂಲಕವೇ ಕಾಮಗಾರಿ ಕೈಗೊಳ್ಳುವಂತೆ ಮಾಡಿದಲ್ಲಿ ಸಂಘಕ್ಕೂ,ಗುತ್ತಿಗೆದಾರರಿಗೂ ನೆರವಾದಂತೆ ಆಗುತ್ತದೆ.ಕಾರಣ ಪರಿಶಿಷ್ಟ ಜಾತಿಯ ಅನುದಾನದ ಕಾಮಗಾರಿಗಳನ್ನು ಪರಿಶಿಷ್ಟ ಜಾತಿಯ ಸಿವಿಲ್ ಗುತ್ತಿಗೆದಾರರಿಗೇ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ನಿರಂಜನ ಪಾಟಣಕರ್,ತಾಲೂಕಾ ಅಧ್ಯಕ್ಷ ನಾಗೇಶ ಬೊವಿವಡ್ಡರ್,ಉಪಾಧ್ಯಕ್ಷ ರಾದ ಪರಶುರಾಮ ಮದನೂರು, ಗೋವಿಂದ ಬಸಾಪುರ,ಕಾರ್ಯದರ್ಶಿ ಮಾರುತಿ ಬೋವಿವಡ್ಡರ್,ಖಜಾಂಚಿ ತೋಳರಾಮ ಅತ್ರರವಾಲ,ಸದಸ್ಯರಾದ ಅಶೋಕ ಕೊರವರ, ದ್ಯಾಮಣ್ಣ ಬೋವಿವಡ್ಡರ್,ತಿಮ್ಮಣ್ಣ ಬೋವಿವಡ್ಡರ್, ವಿಶ್ವನಾಥ ಬೋರಕರ್,ದರ್ಶನ ಪಾಟಣಕರ್,ಹನುಮಂತ ಕೊರವರ,ಸುರೇಶ ಬೊವಿವಡ್ಡರ್, ರವೀಶ ಬೋರಕರ್,ನಾಗರಾಜ ಬೊವಿವಡ್ಡರ,ಭರತ ವಡ್ಡರ್,ವೀರೇಶ್ ವಡ್ಡರ್ ಮುಂತಾದವರು ಇದ್ದರು.