Slide
Slide
Slide
previous arrow
next arrow

ಎಂ.ಇ.ಎಸ್  ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿದೆ : ಆರ್.ಎನ್ ಹೆಗಡೆ ಗೋರ್ಸಗದ್ದೆ

300x250 AD

ಶಿರಸಿ: ಟಿ.ಎಸ್.ಎಸ್  ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ. ಆರ್ಥಿಕತೆ, ಏಕತೆ, ಸಹಕಾರ ಕ್ಷೇತ್ರದಲ್ಲಿ ಕಡವೆ ಹೆಗಡೆಯವರ ಕೊಡುಗೆ ಅಪಾರ. ಕಡವೆ ಹೆಗಡೆಯವರದ್ದು ಅಪರೂಪದ ವ್ಯಕ್ತಿತ್ವವಾಗಿತ್ತು,  ನಿರಂತರವಾಗಿ ಜನರೊಂದಿಗೆ ಸಂಪರ್ಕವನ್ನು ಹೊಂದಿ ಸಹಕಾರಿ ತತ್ವವನ್ನು ಜನರ ಮನಸ್ಸಿನಲ್ಲಿ ಹುಟ್ಟುಹಾಕಿದ ಕಾರಣ ಮೂರು ತಾಲೂಕುಗಳಲ್ಲಿಯೂ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆದು ನಿಂತಿವೆ ಎಂದು ಸಹಕಾರಿ ಧುರೀಣ ಆರ್.ಎನ್ ಹೆಗಡೆ ಗೋರ್ಸಗದ್ದೆ ಹೇಳಿದರು.

  ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ  ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಬಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ  ಶ್ರೀಪಾದ ಹೆಗಡೆ ಕಡವೆ ಸ್ಮರಣಾರ್ಥ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದಿನ ಕಾಲೇಜು ದಿನಗಳ ಮೆಲುಕು ಹಾಕುತ್ತಾ, ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಹೋಗಬೇಕಿತ್ತು.ಆದರೆ ಎಂ. ಇ.ಎಸ್  ಶಿಕ್ಷಣ ಸಂಸ್ಥೆ ಸ್ಥಾಪನೆಯ ಪರಿಣಾಮ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿ ನಿಂತಿದೆ ಎಂದರು.

ಶ್ರೀಪಾದ ಹೆಗಡೆ ಕಡವೆ ಟಿ. ಎಸ್.ಎಸ್. ಸಂಸ್ಥೆ ಹುಟ್ಟುಹಾಕುವುದರ ಮೂಲಕ ಸಾವಿರಾರ ರೈತರ ಕುಟುಂಬಕ್ಕೆ ಆಶ್ರಯವಾದರು . ಮೊದಲು ಈ ಸಂಸ್ಥೆಯು ಚಿಕ್ಕದಾಗಿತ್ತು. ಬೆಳೆಗಾರರ ಹಿತಕ್ಕಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿಯೂ ಸಂಸ್ಥೆಯನ್ನು ಹುಟ್ಟುಹಾಕಿದರು. ಅಡಿಕೆ ಬೆಳೆಗಾರರ ಮಾನ ಉಳಿಸಲು ಹುಟ್ಟಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ರೈತರ ಅನುಕೂಲಕ್ಕಾಗಿ ಎ.ಪಿ.ಎಂ.ಸಿ ಯಾರ್ಡ್ ಸ್ಥಾಪಿಸಿದರು. ಎಲ್ಲಾ ವ್ಯಾಪಾರಸ್ಥರಿಗೂ ಒಂದೇ ಸೂರಿನಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದರು.

ರೈತರು ಕಷ್ಟದಲ್ಲಿರುವಾಗ ಟಿ. ಎಸ್.ಎಸ್ ಸಂಸ್ಥೆಯು ಸಹಾಯಕ್ಕೆ ಧಾವಿಸುತ್ತಿದೆ. ಬೆಳೆಗಾರರ ಹಿತರಕ್ಷಣೆಗೆ ಶ್ರೀಪಾದ ಹೆಗಡೆ ಬದ್ಧರಾಗಿದ್ದರು. ಸಹಕಾರಿ ಕ್ಷೇತ್ರಕ್ಕೆ ಬಲವಾದ ನಾಯಕತ್ವ ಕೊಟ್ಟರು. ಕಡವೆಯವರಂತೆ ಜಿ. ಎಸ್ ಹೆಗಡೆ ಅಜ್ಜಿಬಳ ಕೂಡ ಸಹಕಾರಿ ಸಂಘದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎಂದರು.

ಪಂಚವಾರ್ಷಿಕ ಯೋಜನೆಯು ದೇಶಕ್ಕೆ ಪೂರಕವಾಗಿತ್ತು. ಸಮಾಜವಾದಿ ಮತ್ತು ಕಮ್ಯುನಿಸ್ಟ್ ಆರ್ಥಿಕ ವಾದದ ಉತ್ತಮ ವಿಷಯಗಳ ಮಿಶ್ರ ಆರ್ಥಿಕತೆಯ ಸೂತ್ರವಾಗಿ ಸಹಕಾರಿ ತತ್ವ ಉದಯಿಸಿತು. ಸಹಕಾರಿ ಚಳುವಳಿಯು ಈ ದೇಶಕ್ಕೆ ಮಾದರಿಯಾಗಿದೆ. ಯುವಜನತೆಯಲ್ಲಿ ಬದ್ಧತೆ ಇರಬೇಕು. ಇಂದು ಅದು ಕಡಿಮೆಯಾಗುತ್ತಿದೆ. ಯುವಜನರು ಕಡವೆಯವರ ಆದರ್ಶ ಗಳನ್ನು ಅನುಸರಿಸಬೇಕು. ಮೊಬೈಲ್ ಗೀಳು ಬಿಟ್ಟು ಓದುವತ್ತ ಗಮನಹರಿಸಬೇಕು ಎಂದರು.

300x250 AD

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಶಿರಸಿಯ ನಿವೃತ್ತ ಪ್ರಾಚಾರ್ಯರಾದ ಪ್ರೊ. ಕೆ. ಎನ್. ಹೊಸಮನಿ ಮಾತನಾಡುತ್ತಾ ಕಡವೆ ಹೆಗಡೆಯವರ ವ್ಯಕ್ತಿತ್ವ ಗೌರವಿಸುತ್ತಾ ಬಂದವರಲ್ಲಿ ತಾವು ಒಬ್ಬರಾಗಿದ್ದು ಶ್ರೇಷ್ಠ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ಆನೆ ನಡೆದಿದ್ದೇ ದಾರಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಕಡವೆ ಹೆಗಡೆಯವರು ಸೇವೆ ಸಲ್ಲಿಸದ ಕ್ಷೇತ್ರಗಳೇ ಇಲ್ಲ. ಕಡವೆ ಅವರದ್ದು ರಾಜಿಯಾಗದ ವ್ಯಕ್ತಿತ್ವ. ಆರ್ಥಿಕ,ರಾಜಕೀಯ, ಶಿಕ್ಷಣ ಸಹಕಾರ ರಂಗದಲ್ಲಿ ಅವರ ಸಾಧನೆ ಅಪಾರವಾದದ್ದು ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಇ ಎಸ್ ಅಧ್ಯಕ್ಷ ಜಿ. ಎಮ್. ಹೆಗಡೆ ಮುಳಖಂಡ  ಕಡವೆ ಹೆಗಡೆಯವರು ನಮ್ಮ ಜಿಲ್ಲೆಯಲ್ಲಿ ಮಾಡದ ಕೆಲಸವಿಲ್ಲ ಅಂಗನವಾಡಿ ಸ್ಥಾಪನೆಯ ಮುಖಾಂತರ ಸಹಕಾರಿ ವ್ಯವಸ್ಥೆಗೆ ಪ್ರವೇಶ ಮಾಡಿದರು. ಇವರದೊಂದು ಅಪರೂಪದ ವ್ಯಕ್ತಿತ್ವವಾಗಿದ್ದು ಸಹಕಾರಿ ರತ್ನವಾಗಿದ್ದಾರೆ. ಇಂದು ಸಹಕಾರಿ ಕ್ಷೇತ್ರ ಸುವರ್ಣ ಯುಗದಲ್ಲಿದೆ ಎಂದರೆ ಇದಕ್ಕೆ ಕಾರಣ ಕಡವೆ ಅವರ ಶ್ರಮ ಇದರ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಸಹಕಾರಿ ಕ್ಷೇತ್ರದ ಕುರಿತು ಜನರಲ್ಲಿ ಇನ್ನು ಹೆಚ್ಚಿನ ಅರಿವು ಮೂಡಿ ಇನ್ನೂ ಉತ್ತುಂಗಕ್ಕೆ ಕೊಂಡೊಯ್ದರೆ ಕಡವೆ ಅವರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಸ್ವಾಗತಿಸಿ ಮಾತನಾಡಿದ ಪ್ರಾಚಾರ್ಯ ಡಾ.ಟಿ.ಎಸ್ ಹಳೇಮನೆ, ಶ್ರೀಪಾದ ಹೆಗಡೆಯವರು ನಮ್ಮ ಸಂಸ್ಥೆಯ ಅಡಿಪಾಯವಾಗಿದ್ದಾರೆ. ನಾವು ಹಾಗು ವಿಧ್ಯಾರ್ಥಿಗಳು ಎಂದಿಗೂ ಅವರ ಕೊಡುಗೆಯನ್ನು ಸ್ಮರಿಸಬೇಕು ಎಂದರು.

ಕಡವೆ ಹೆಗಡೆ ಯವರ ಸ್ಮರಣಾರ್ಥ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯ ವಿಜೇತರನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು.ಎಂ ಇ ಎಸ್ ವಾಣಿಜ್ಯ ಮಹಾವಿದ್ಯಾಲಯದ ದೀಪ್ತಿ ಭಟ್ ಪ್ರಥಮ, ಬಿ ವಿ ಜಿ ಎಸ್ ಕಲಾ ವಾಣಿಜ್ಯ ಕಾಲೇಜು ಸದಾಶಿವಗಡದ ನಂದಿನಿ ಸಾವಂತ್ ದ್ವಿತೀಯ ಹಾಗೂ ಎಂ ಎಂಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಜಾತವೇದ ಭಟ್ ತೃತೀಯ ಸ್ಥಾನ ಪಡೆದರು. ಅವರಿಗೆ  ಬಹುಮಾನ ವಿತರಿಸಲಾಯಿತು. ಕಾಲೇಜಿನ ಉಪನ್ಯಾಸಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರೊ. ಎಂ ಎನ್ ಭಟ್ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top