• first
    second
    third
    previous arrow
    next arrow
  • 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

    300x250 AD

    ಹೊನ್ನಾವರ: ತಾಲ್ಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿಯೋರ್ವಳು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.

    ವನಿತಾ ನಾಯ್ಕ (28) ಹಾಗೂ ಆಕೆಯ 2 ವರ್ಷದ ಮಗಳಾಗಿರುವ ಮನಸ್ವಿ ಮೃತಪಟ್ಟವರು. ಕೌಟುಂಬಿಕ ಕಲಹವೇ ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದ್ದು, ಮೃತಳ ಸಹೋದರ ದಯಾನಂದ ನಾಯ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ತಂಗಿಯ ಗಂಡ ಮಂಜುನಾಥ ಆಕೆಯ ಮೇಲೆ ಸಂಶಯಪಟ್ಟು ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಕಳೆದ 4- 5 ತಿಂಗಳಿಂದ ಆಕೆಗೆ ಮೊಬೈಲ್‌ನಲ್ಲಿ ಮಾತನಾಡಲು ಸಹ ಕೊಡುತ್ತಿರಲಿಲ್ಲ. ಅಲ್ಲದೇ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದ್ದರಿಂದಲೇ ತಂಗಿ ವನಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    300x250 AD

    ಪ್ರಕರಣದ ಕುರಿತಂತೆ ಜಲವಳಕರ್ಕಿಯ ನಿವಾಸಿ ಮೃತಳ ಪತಿ ಮಂಜುನಾಥ ನಾಯ್ಕ, ಅತ್ತೆ ಸಾವಿತ್ರಿ ನಾಯ್ಕ, ನಾದಿನಿಯರಾದ ತಾರಾ ನಾಯ್ಕ, ನೇತ್ರಾ ನಾಯ್ಕ ಮೇಲೆ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Back to top