Slide
Slide
Slide
previous arrow
next arrow

ಶಿರಸಿ ಲಯನ್ಸ್, ಲಿಯೋ ಕ್ಲಬ್ಸ್ ಪದಾಧಿಕಾರಿಗಳ ಪದಗ್ರಹಣ

300x250 AD

ಶಿರಸಿ; ನಗರದ ಲಯನ್ಸ್ ಭವನದಲ್ಲಿ ಇತ್ತೀಚೆಗೆ ಶಿರಸಿ ಲಯನ್ಸ್ ಕ್ಲಬ್, ಸಿರ್ಸಿ ಲಿಯೋ ಕ್ಲಬ್ ಮತ್ತು ಲಿಯೋ ಶ್ರೀನಿಕೇತನ ಕ್ಲಬ್‌ನ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಲಿಯೋ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಉಪಾಧ್ಯಕ್ಷ ಲಯನ್ ಅಶ್ವಥ್ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. 2021-22ರ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಸಿರ್ಸಿ ಲಯನ್ಸ್ ಕ್ಲಬ್‌ನ ವಿಸ್ತೃತ ಸೇವಾ ವರದಿಯನ್ನು ಕಾರ್ಯಕ್ರಮದಲ್ಲಿ ಮಂಡಿಸಿದರು. ಲಿಯೋ ಕ್ಲಬ್‌ಗಳ ಕಾರ್ಯದರ್ಶಿಗಳು ತಮ್ಮ ಕ್ಲಬ್‌ಗಳ ವರದಿ ಮಂಡಿಸಿದರು.
ಪದಗ್ರಹಣ ಅಧಿಕಾರಿಯಾಗಿ ಜಿ.ಎಮ್.ಟಿ. ಕೋಆರ್ಡಿನೇಟರ್ ಡಿಸ್ಟ್ರಿಕ್ಟ್ 317 ಬಿ ಯ ಎಮ್.ಜೆ.ಎಫ್. ಲಯನ್ ಜೈಅಮೊಲ ನಾಯ್ಕರವರು ಗೋವಾದಿಂದ ಆಗಮಿಸಿ, 2022-23ನೇ ಸಾಲಿನ ಸಿರ್ಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಮ್.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ, ಕಾರ್ಯದರ್ಶಿಯಾಗಿ ಎಮ್.ಜೆ.ಎಫ್ ಲಯನ್ ರಮಾ ಪಟವರ್ಧನ ಮತ್ತು ಖಜಾಂಚಿಯಾಗಿ ಲಯನ್ ರಾಜಲಕ್ಷ್ಮಿ ಹೆಗಡೆ ಮತ್ತು ಇತರೆ ಪಧಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ, ಸಿರ್ಸಿ ಲಿಯೋ ಕ್ಲಬ್ ಅಧ್ಯಕ್ಷೆಯಾಗಿ ಲಿಯೋ ಅನನ್ಯ ಹೆಗಡೆ, ಕಾರ್ಯದರ್ಶಿಯಾಗಿ ಲಿಯೋ ಶ್ರೇಯಾ ಬಡಿಗೇರ, ಖಜಾಂಚಿಗಳಾಗಿ ಲಿಯೋ ಪೂರ್ವಿ ಮುರಡೇಶ್ವರ ಮತ್ತು ಲಿಯೋ ಶ್ರೀನಿಕೇತನ ಕ್ಲಬ್‌ನ ಅಧ್ಯಕ್ಷರಾಗಿ ಲಿಯೋ ಹರ್ಷಿತ ಭಾಗವತ, ಕಾರ್ಯದರ್ಶಿಯಾಗಿ ಲಿಯೋ ಸುಘೋಷ ಜೋಶಿ, ಖಜಾಂಚಿಯಾಗಿ ಲಿಯೋ ಸ್ತುತಿ ಹೆಗಡೆ ಪದಗ್ರಹಣ ಮಾಡಿದರು.
ಪದಗ್ರಹಣ ನೆರವೆರಿಸಿ ಮಾತನಾಡಿದ ಲಯನ್ ಜೈಅಮೊಲ ನಾಯ್ಕ, ಲಯನ್ಸ್ ಇಂಟರ್ ನ್ಯಾಶನಲ್‌ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು ಹಾಗೂ ಸಿರ್ಸಿ ಲಯನ್ಸ್ ಕಾರ್ಯ ಚಟುವಟಿಕೆಗಳನ್ನು ಶ್ಞಾಘಿಸಿ, ಸಿರ್ಸಿ ಲಯನ್ಸ್ ಶಾಲೆಯ ಸಾಧನೆಗಳನ್ನು ಕೊಂಡಾಡಿದರು. ಸುವರ್ಣ ಸಂಭ್ರಮದಲ್ಲಿರುವ ಸಿರ್ಸಿ ಲಯನ್ಸ್ ಕ್ಲಬ್ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸೇವಾ ಕಾರ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಹಾಗೂ 2021-22ನೇ ಸಾಲಿನ ಪದಾಧಿಕಾರಿಗಳ ಸೇವಾ ಕಾರ್ಯವನ್ನು ಶ್ಞಾಘಿಸಿದರು. ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ರೀಜನ್ X District 317 B,ರೀಜನ್ ಚೇರಮನ್ ಪಿ.ಎಮ್.ಜೆ.ಎಫ್. ಲಯನ್ ಡಾ. ಕೀರ್ತಿ ನಾಯ್ಕ ಇವರು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಆರಿಸಿಕೊಳ್ಳುವುದು ಪ್ರತಿಯೊಬ್ಬರ ಕೈಯಲಿದೆಯೆಂದು, ಸೇವೆಯ ಮೂಲಕ ಸಮಾಜದ ಋಣ ತೀರಿಸಬೇಕೆಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್ ಎನ್.ವಿ.ಜಿ.ಭಟ್ ಮತ್ತು ರೀಜನ್ ಚೇರಮನ್ ಎಮ್.ಜೆ.ಎಫ್. ಲಯನ್ ಜ್ಯೋತಿ ಭಟ್ ಶುಭ ಹಾರೈಸಿದರು.
ಲಯನ್ ಪ್ರತಿಭಾ ಹೆಗಡೆ ಮತ್ತು ಲಯನ್ ಜ್ಯೋತಿ ಅಶ್ವಥ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top