ಯಲ್ಲಾಪುರ: ಹಿಂದುಘಟನೆಗಳ ಪ್ರಮುಖ ತಾಲೂಕಿನ ಕುಂಬ್ರಾಳ ಕಟ್ಟಿಗೆ ಊರಿನ ಸತೀಶ ಕಟ್ಟಿಗೆ (50) ಸೋಮವಾರ ನಿಧನರಾದರು. ಕೆಲ ಕಾಲಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅವತು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತಂದೆ, ತಾಯಿ, ಸಹೋದರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಪ್ರಚಾರಕರು, ಪ್ರಸ್ತುತ ಶಿರಸಿಯಲ್ಲಿ ಕ್ಯಾಂಪ್ಕೋ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಾ, ರಾಷ್ಟ್ರೀಯ ವಿಚಾರಗಳಿಗೆ ಬೆನ್ನೆಲುಬಾಗಿ,ಸ್ವಯಂಸೇವಕರ ಶಕ್ತಿಯಾಗಿದ್ದರು. ವಿದ್ಯಾರ್ಥಿ ಪರಿಷತ್, ಹಿಂದು ಜಾಗರಣಾ ವೇದಿಕೆ, ಭಜರಂಗದಳ, ವಿ.ಹಿಂ.ಪರಿಷತ್ ಸೇರಿದಂತೆ ವಿವಿಧ ಹಿಂದು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಕರಸೇವೆಯಲ್ಲಿ ಭಾಗವಹಿಸಿದ್ದರು. ಅವರು ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.