• Slide
    Slide
    Slide
    previous arrow
    next arrow
  • ಸಾಹಿತ್ಯ ಕೃತಿಗಳ ಓದು ಸೃಜನಶೀಲತೆಗೆ ಪ್ರೇರಕ: ಡಾ.ಬಿ.ಎನ್.ಅಕ್ಕಿ

    300x250 AD

    ದಾಂಡೇಲಿ: ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆ ನೀಡುತ್ತದೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಲಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವ ದಾರಿಗಳನ್ನು ತೆರೆಯುತ್ತದೆ ಎಂದು ಪ್ರಾಧ್ಯಾಪಕ ಡಾ.ಬಿ.ಎನ್.ಅಕ್ಕಿಯವರು ಅಭಿಪ್ರಾಯಪಟ್ಟರು.

    ಅವರು ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಆರಂಭವಾದ ಅಭಿರುಚಿ ಪುಸ್ತಕ ಪ್ರೇಮಿ ಬಳಗವನ್ನು ಇಂದು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಾಹಿತ್ಯ ಕೃತಿಗಳನ್ನು ನೀಡುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವಿನಯಾ ಜಿ.ನಾಯಕ, ವಾರಕ್ಕೊಮ್ಮೆ ಆಸಕ್ತ ವಿದ್ಯಾರ್ಥಿಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ನೀಡಿ ಓದಿಸಿ ಹಾಗೂ ಕನ್ನಡ ಸಿನೇಮಾ ತೋರಿಸಿ ಚರ್ಚಿಸುವುದು ಅಭಿರುಚಿ ಬಳಗದ ಉದ್ದೇಶವೆಂದು ಹೇಳಿದರು.

    300x250 AD

    ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಡಿ.ಒಕ್ಕುಂದ, ಜಗತ್ತಿನ ದೊಡ್ಡ ವ್ಯಕ್ತಿಗಳೆಲ್ಲ ಅಧ್ಯಯನದ ಮೂಲಕವೇ ವ್ಯಕ್ತಿತ್ವವನ್ನು ಬೆಳಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಇಷ್ಟದ ಕೃತಿಯನ್ನು ಓದಿಗೆ ಆಯ್ಕೆ ಮಾಡಿಕೊಂಡರು. ಗ್ರಂಥಪಾಲರಾದ ಗೀತಾ ಕೋಟಣ್ಣವರ ಉಪಸ್ಥಿತರಿದ್ದರು.

    ವಿದ್ಯಾರ್ಥಿನಿಯರಾದ ಬೆರ್ನಾಬೆತ್ ಪ್ರಾರ್ಥಿಸಿದರು. ಕಾವ್ಯಾ ಭಟ್ ಭಾವಗೀತೆ ಹಾಡಿದರು. ಸರಿತಾ ನಂದಿ ಸ್ವಾಗತಿಸಿದರು. ಪ್ರಿಯಾಂಕಾ ಪಾತ್ರೋಟ ವಂದಿಸಿದರು. ಭಾರ್ಗವಿ ಪಿ. ಕಾರ್ಯಕ್ರಮ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top