Slide
Slide
Slide
previous arrow
next arrow

ಬೇಡ ಜಂಗಮದ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಲು ಮನವಿ

300x250 AD

ಸಿದ್ದಾಪುರ: ತಾಲೂಕು ಬೇಡ ಜಂಗಮದ ಸಮಾಜದ ವತಿಯಿಂದ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಮನವಿಯನ್ನು ನೀಡಲಾಯಿತು. ತಹಶಿಲ್ದಾರ ಸಂತೋಷ ಭಂಡಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರಯ್ಯ ಕಾನಳ್ಳಿಮಠ, ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ವಕೀಲರಾದ ಬಿ.ಡಿ.ಹಿರೇಮಠ್‌ರವರ ನೇತೃತ್ವದಲ್ಲಿ 21 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಯುತ್ತಿದೆ. ಇದನ್ನು ತಾಲೂಕು ಬೇಡ ಜಂಗಮ ಸಮುದಾಯವು ಸಹ ಬೆಂಬಲಿಸುತ್ತದೆ. ನಮ್ಮ ಬೇಡಿಕೆ ನ್ಯಾಯ ಸಮ್ಮತವಾದುದ್ದಾಗಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಕಾನಳ್ಳಿಮಠ, ಸಂಗಮೇಶ, ರಾಜಶೇಖರ ಸ್ವಾಮಿ, ವೀರಭದ್ರ ಸ್ವಾಮಿ, ಅರುಣ ತೆಂಗಿನಮಠ, ಶಿವಕುಮಾರ ಹಿರೇಮಠ, ಪುಟ್ಟಯ್ಯ ಅಲಳ್ಳಿಮಠ, ಮಹಾಲಿಂಗಯ್ಯ ಕುಂದುಗೋಳ ಮಠ, ರಾಜು ಕುಂದಗೋಳ್ಳಮಠ, ಸೋಮಶೇಖರ ಸೋಗೆಮಠ, ಶಂಭುಲಿಂಗಯ್ಯ ಹಂಚಿನ ಮಠ ಮೊದಲಾದವರು ಇದ್ದರು.

Share This
300x250 AD
300x250 AD
300x250 AD
Back to top