Slide
Slide
Slide
previous arrow
next arrow

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900ಕ್ಕೂ ಅಧಿಕ ಪಡಿತರ ಅಕ್ಕಿ ಚೀಲ ಪತ್ತೆ

300x250 AD

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಸಲಗದ್ದೆಯ ನಿರ್ಜನ ಪ್ರದೇಶದಲ್ಲಿನ ಪಾಳುಬಿದ್ದ ಕ್ಯಾಶ್ಯು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900ಕ್ಕೂ ಅಧಿಕ ಪಡಿತರ ಅಕ್ಕಿಯ ಚೀಲ ಪತ್ತೆಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ ಹಾಗೂ ಸಿಪಿಐ ನೃತೃತ್ವದ ತಂಡ ದಾಳಿ ನಡೆಸಿ ಅಕ್ಕಿಚೀಲಗಳನ್ನ ವಶಕ್ಕೆ ಪಡೆದಿದೆ.

ಸಾರ್ವಜನಿಕರ ದೂರಿನ್ವಯದಂತೆ ತಹಶೀಲ್ದಾರ ಡಾ.ಸುಮಂತ, ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟ ಗೋದಾಮ ಮೇಲೆ ದಾಳಿ ನಡೆಸಲಾಗಿದೆ. ಅಕ್ಕಿಯನ್ನು ತಾಲೂಕಿನ ನಾನಾ ಕಡೆಗಳಿಂದ ಜನರಿಂದ ಪಡೆದು ಸಂಗ್ರಹಿಸಿ, ಕಡಸಲಗದ್ದೆಯಲ್ಲಿನ ನಿರ್ಜನ ಪ್ರದೇಶದ ಹಳೆಯ ಕ್ಯಾಶ್ಯು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಪೊಲೀಸರು ಗೋದಾಮಿನೊಳಗೆ ಪರಿಶೀಲಿಸಿದಾಗ, 900ಕ್ಕೂ ಅಧಿಕ ಚೀಲದಲ್ಲಿ ಸಾವಿರಾರು ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದನ್ನು ಕಂಡು ಒಮ್ಮೆ ಹೌಹಾರಿದ್ದಾರೆ. ಗೋದಾಮಿನಲ್ಲಿ ನಾನಾ ಕಡೆಯಿಂದ ಸಂಗ್ರಹಿಸಿದ ಅಕ್ಕಿಯನ್ನು ಸಿಮೆಂಟ್ ಚೀಲದಲ್ಲಿ ತುಂಬಿಸಿ ಯಂತ್ರದಿAದ ಚೀಲವನ್ನು ಹೊಲಿಗೆ ಮಾಡಿರುವುದು ಕಂಡುಬಂದಿದೆ. ಸಾಕಷ್ಟು ಗೋಣಿ ಚೀಲಗಳನ್ನು ಸಹ ಸ್ಥಳದಲ್ಲಿ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಸದ್ಯ ಗೋದಾಮು ಸಹಿತ 900ಕ್ಕೂ ಅಧಿಕ ಅಕ್ಕಿ ಚೀಲ ಹಾಗೂ ಚೀಲ ಹೊಲಿಯುವ ಯಂತ್ರವನ್ನು ಜಪ್ತಿ ಮಾಡಲಾಗಿದೆ.

300x250 AD

ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಇರುವ ಹಿನ್ನೆಲೆಯಲ್ಲಿ ಅಕ್ಕಿಯನ್ನು ಸರಕಾರಿ ಗೋದಾಮಿಗೆ ಸಾಗಾಟ ಮಾಡಲು ಸಾಧ್ಯವಾಗದ್ದರಿಂದ ಸದ್ಯಕ್ಕೆ ಗೋದಾಮು ಜಪ್ತಿ ಮಾಡಲಾಗಿತ್ತಾದರೂ ಸಹ, ರಾತ್ರಿಯಿಂದ ಶನಿವಾರ ಮುಂಜಾನೆಯ ತನಕ ಡಿಆರ್ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು ಕಾವಲು ಕಾದಿದ್ದಾರೆ. ಅಕ್ರಮ ಅಕ್ಕಿ ಸಂಗ್ರಹಿಸಿಟ್ಟ ಆರೋಪಿಗಳು ಮಾಹಿತಿ ತಿಳಿದು ಸ್ಥಳದಿಂದ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ನಡೆಯಬೇಕಾಗಿದೆ.

ಸ್ಥಳದಲ್ಲಿ ಆಹಾರ ನಿರೀಕ್ಷಕ ಪಾಂಡು ನಾಯ್ಕ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಗ್ರಾಮೀಣ ಠಾಣೆ ಪಿಎಸ್‌ಐ ಭರತಕುಮಾರ, ನಗರ ಠಾಣೆ ಪಿಎಸ್‌ಐಗಳಾದ ಸುಮಾ ಬಿ., ಎಚ್.ಕುಡಗುಂಟಿ ಹಾಗೂ ಸಿಬ್ಬಂದಿ ಇದ್ದರು.

Share This
300x250 AD
300x250 AD
300x250 AD
Back to top