• Slide
    Slide
    Slide
    previous arrow
    next arrow
  • ಕಡಲ ಕೊರೆತ ಪ್ರದೇಶಕ್ಕೆ ತಹಶೀಲ್ದಾರ ಭೇಟಿ

    300x250 AD

    ಅಂಕೋಲಾ: ತಾಲೂಕಿನ ಬೊಬ್ರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಗುಡಿ ಕಡಲ ತೀರದಲ್ಲಿ ಕಡಲ ಕೊರೆತ ತೀವ್ರಗೊಂಡ ಪ್ರದೇಶಕ್ಕೆ ಅಂಕೋಲಾ ತಹಶೀಲ್ದಾರ ಉದಯ ಕುಂಬಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಬೊಬ್ರವಾಡ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ತಹಶೀಲ್ದಾರ ಉದಯ ಕುಂಬಾರ ಅವರು ಪಂಚಾಯತಿ ಅಧಿಕಾರಿಗಳು ಇಲ್ಲಿನ ಸಮಸ್ಯೆ ಕುರಿತು ಗಮನ ಹರಿಸದಿರುವ ಬಗ್ಗೆ ಅಸಮಾಧಾನವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಬಾಳಾ ನಾಯ್ಕ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಡಲ ಕೊರೆತದ ತೀವ್ರತೆ ಹೆಚ್ಚುತ್ತಿದ್ದು ತಮ್ಮ ಕುಟುಂಬದ ಜನರು ಮತ್ತು ಸುತ್ತಮುತ್ತಲಿನ ಐದಾರು ಕುಟುಂಬಗಳ ಜನರು ಆತಂಕಗೊಂಡಿರುವುದಾಗಿ ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top