Slide
Slide
Slide
previous arrow
next arrow

ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ:ತನಿಖೆಗೆ ಆದೇಶ

300x250 AD

ಕಾರವಾರ: ತಾಲೂಕು ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ದುರಸ್ತಿಯ ನಂತರದ ಕಡಲ ಪ್ರಯೋಗದಲ್ಲಿದ್ದ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ವಿಕ್ರಮಾದಿತ್ಯದ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಕೆಲವು ತಿಂಗಳುಗಳಿಂದ ನೌಕೆ ಬಳಕೆಯಲ್ಲಿರಲಿಲ್ಲ. ದುರಸ್ತಿ ಕಾರ್ಯ ಪೂರ್ಣಗೊಳಿಸಿ ಬುಧವಾರ ಸಮುದ್ರದಲ್ಲಿ ಪ್ರಯೋಗಾರ್ಥ ಕಾರ್ಯಾಚರಣೆಗಳನ್ನು ನಡೆಸುವ ವೇಳೆ ಇದ್ದಕ್ಕಿದ್ದಂತೆ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ನೌಕಾ ಸಿಬ್ಬಂದಿ ಒಮ್ಮೆಲೆ ಆತಂಕಿತರಾದರೂ, ಯುದ್ಧನೌಕೆಯಲ್ಲಿ ಅಳವಡಿಸಲಾದ ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದರ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ವಿಕ್ರಮಾದಿತ್ಯ ಇನ್ನೂ ಆಳ ಸಮುದ್ರದಲ್ಲಿದ್ದು, ಗುರುವಾರ ಕೂಡ ಸೀಬರ್ಡ್ ನೌಕಾನೆಲೆಯ ಜಟ್ಟಿಗೆ ಬಂದಿರಲಿಲ್ಲ. ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.

300x250 AD

47,000 ಟನ್ ತೂಕದ ಐಎನ್‌ಎಸ್ ವಿಕ್ರಮಾದಿತ್ಯವನ್ನ ಕ್ಯಾಪ್ಟನ್ ಸುಶೀಲ್ ಮೆನನ್ ಮುನ್ನಡೆಸುತ್ತಿದ್ದರು. ಈ ಹಿಂದೆ 2019ರಲ್ಲಿ ಕೂಡ ಇಂಥದ್ದೇ ಘಟನೆ ನಡೆದು ಓರ್ವ ನೌಕಾ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಬಳಿಕ 2021ರಲ್ಲೂ ಇದೇ ಘಟನೆ ಮರುಕಳಿಸಿತ್ತು. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿರಲಿಲ್ಲ. ಈ ಎರಡೂ ಪ್ರಕರಣವನ್ನ ಅಂದು ಕೂಡ ನೌಕಾಪಡೆ ತನಿಖೆಗೆ ಆದೇಶಿಸಿತ್ತು. ಆದರೂ ಇಂದು ಮತ್ತೆ ಇದೇ ಘಟನೆ ಮರುಕಳಿಸಿರುವುದು ಆತಂಕಕಾರಿಯಾಗಿದೆ.

Share This
300x250 AD
300x250 AD
300x250 AD
Back to top