ಭಟ್ಕಳ: ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿದೆ. ಇದಕ್ಕೆ ಪ್ರಮುಖ ಕಾರಣ ಭಾರತೀಯರಲ್ಲಿ ಬಹುಸಂಖ್ಯಾತರು ದುಡಿಯುವ ವಯಸ್ಸಿನಲ್ಲಿ ದುಡಿಯದೇ ಇರುವುದೇ ಕಾರಣವಾಗಿದೆ ಎಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ರುಡ್‌ಸೆಟ್ ಕೇಂದ್ರದ ಹಿರಿಯ ಉಪನ್ಯಾಸಕ ಕುತ್ತೂರು ಕರುಣಾಕರ ಜೈನ್ ಹೇಳಿದರು.
ಅವರು ಅಂಜುಮನ್ ಪದವಿ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಘಟಕವು ಹಮ್ಮಿಕೊಂಡ ಒಂದು ದಿನದ ಸ್ವಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಪ್ರೊ. ಎಸ್. ಎ. ಇಂಡಿಕ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ನಿಶ್ಚಿತವಲ್ಲ. ಅದಕ್ಕಾಗಿ ಸ್ವಂತ ಉದ್ಯೋಗ ಅಥವಾ ಉದ್ದಿಮೆಯನ್ನು ಸ್ಥಾಪಿಸುವುದರ ಮೂಲಕ ನಿರುದ್ಯೋಗಿಗಳಿಗೆ ನೀವೇ ಉದ್ಯೋಗ ನೀಡುವತ್ತ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್ಎಸ್ಎಸ್ ಅಧಿಕಾರಿ ಪ್ರೊ. ಆರ್.ಎಸ್. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕ ಪ್ರೊ. ಗಾನಿಮ್ ಸ್ವಾಗತಿಸಿದರೆ, ವಿದ್ಯಾರ್ಥಿ ಅಮೃತ ನಾಯಕ ವಂದಿಸಿದರು.ವಿದ್ಯಾರ್ಥಿ ನಯನಾ ಮೊಗೇರ ಅತಿಥಿಗಳನ್ನು ಪರಿಚಯಿಸಿದರೆ, ನವೀನ್ ಕಾರ್ಯಕ್ರಮವನ್ನು ನಿರೂಪಿಸಿದರು.