Slide
Slide
Slide
previous arrow
next arrow

ತಾಲೂಕಾ ಕ್ರೀಡಾಂಗಣದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 97.50 ಲಕ್ಷ ರೂ. ವಿಶೇಷ ಅನುದಾನ

300x250 AD

ಯಲ್ಲಾಪುರ: ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅವಿರತ ಪ್ರಯತ್ನದ ಫಲವಾಗಿ ಪಟ್ಟಣದ ತಾಲೂಕಾ ಕ್ರೀಡಾಂಗಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 97.50 ಲಕ್ಷ ರೂಪಾಯಿ ವಿಶೇಷ ಅನುದಾನವು ಮಂಜೂರಾಗಿದ್ದು, ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ತಾಲೂಕಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಅನುದಾನದ ಸಮರ್ಪಕ ಬಳಕೆಯ ಕುರಿತಂತೆ ದೈಹಿಕ ಶಿಕ್ಷಕರು ಹಾಗೂ ಸ್ಥಳೀಯ ಹಿರಿಯ ಕ್ರೀಡಾಪಟುಗಳ ಜೊತೆಯಲ್ಲಿ ಸಭೆ ನಡೆಸಿ, ಕ್ರೀಡಾಂಗಣದ ಅಭಿವೃದ್ಧಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಶೀಘ್ರವಾಗಿ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಯುವನಾಯಕರಾದ ವಿವೇಕ್ ಹೆಬ್ಬಾರ್, ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಡಾ. ರವಿ ಭಟ್ ಬರಗದ್ದೆ ಪ್ರಮುಖರಾದ ರಾಮು ನಾಯ್ಕ, ರವಿ ಶಾನಭಾಗ, ಗೋಪಾಲಕೃಷ್ಣ ತಾಂಡುರಾಯನ್, ಬಾಲಕೃಷ್ಣನಾಯಕ, ಶಿರಿಷ್ ಪ್ರಭು, ಹಾಗೂ ಪ. ಪಂ ಅಧ್ಯಕ್ಷರು, ಸದಸ್ಯರು, ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top