• Slide
  Slide
  Slide
  previous arrow
  next arrow
 • ಹುಟ್ಟುಹಬ್ಬದಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಿದ ದೇವಿದಾಸ ನಾಯ್ಕ

  300x250 AD

  ಕಾರವಾರ: ಸಮಾಜ ಸೇವಕರು ಹಾಗೂ ಕಾರವಾರ ನಗರಸಭೆಯ ಮಾಜಿ ಸದಸ್ಯರಾದ ದೇವಿದಾಸ ನಾಯ್ಕ ತಮ್ಮ ಜನ್ಮದಿನದಂದು ಶಿವಾಜಿ ವಿದ್ಯಾಮಂದಿರ ಅಸ್ಕೋಟಿ ಕಾರವಾರದಲ್ಲಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವಿದಾಸ ನಾಯ್ಕರವರು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಬಗೆಗೆ ಬಹಳಷ್ಟು ಅಭಿಮಾನವಿದ್ದುದರಿಂದ ಯಾವಾಗಲೂ ಇಲ್ಲಿಗೆ ಬಂದು ನನ್ನಿಂದಾದ ಸಹಾಯ ಮಾಡುತ್ತಿದ್ದೆನೆ ಮುಂದೆಯೂ ಮಾಡುತ್ತೇನೆ ವಿದ್ಯಾರ್ಥಿಗಳು ಸುಂದರವಾದ ಭವಿಷ್ಯದತ್ತ ಗಮನ ಹರಿಸಬೇಕೆಂದು ಮಾರ್ಮಿಕವಾಗಿ ನುಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬಾಡ ಮಹದೇವ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಾನಂದ ನಾಯ್ಕರವರು ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಾ ಸಾಗಿದರೆ ಎಲ್ಲರು ಪ್ರಸಂಶಿಸುತ್ತಾರೆ ಅಷ್ಟೇ ಅಲ್ಲಾ ಭಗವಂತನು ಆಶಿರ್ವಾದಿಸುತ್ತಾನೆ. ದೇವಿದಾಸರ ಕೆಲಸಗಳು ನಮಗೆಲ್ಲ ಮಾದರಿಯಾಗಿವೆ. ಎಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕರಾದ ದಿನೇಶ ಗಾಂವಕರವರು ವಹಿಸಿ ದೇವಿದಾಸ ನಾಯ್ಕರವರು ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ನೀಡುತ್ತಿರುವದು ಶ್ಲಾಘನೀಯವಾಗಿದೆ.ಭಗವಂತ ಅವರಿಗೆ ಆಯುಷ್ಯ ಅರೋಗ್ಯ ದಯಪಾಲಿಸಲೆಂದು ಹಾರೈಸಿದರು.

  300x250 AD

  ವೇದಿಕೆಯ ಮೇಲೆ ದಿವ್ಯಾ ದೇವಿದಾಸ ನಾಯ್ಕ, ರಾಹುಲ್ ದೇವಿದಾಸ ನಾಯ್ಕ ಪ್ರಕಾಶ ಪುರಸನ್,ವಿನಯರಾಜ ಪಂತ, ಸಂತೋಷ ನಾಯ್ಕ ಉಪಸ್ಥಿತರಿದ್ದರು. ಸಹನಾ ವೇಳಿಫ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕ ಗಣೇಶ ಎನ್ ಬಿಷ್ಟಣ್ಣನವರ ಸ್ವಾಗತಿಸಿ ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top