ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕೃತಿ ವಿಕೋಪ ಪರಿಶೀಲನಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.ಯಲ್ಲಾಪುರ ತಾಲೂಕಿನಲ್ಲಿ 29 ಮನೆ ಬಿದ್ದು ಹಾನಿಯಾಗಿದೆ. ಒಂದು ಕೊಟ್ಟಿಗೆ ಹಾನಿ ಆಗಿದೆ.ಉಸ್ತುವಾರಿ ಸಚಿವರ ಆದೇಶವೆಂದು ಪರಿಗಣಿಸಿ ಕೊಟ್ಟಿಗೆ ಹಾನಿಗೆ ಹೆಚ್ಚಿನ ಪರಿಹಾರ ಕೊಡಿ ಸಚಿವ ಪೂಜಾರಿ ಸೂಚಿಸಿದರು.
ಶೇ. ಭಾಗ 33 ನಾಟಿ ಆಗಿದೆ.ಬೀಜ ಗೊಬ್ಬರ ದಾಸ್ತಾನು ಇದೆ.ಮಳೆಯಿಂದ ಹಾನಿ ಆಗಿಲ್ಲ ಎಂದು ಸಹಾಯಕ ಕೃಷಿ ನಿರ್ಧೆಶಕ ನಾಗರಾಜ ನಾಯ್ಕ ಮಾಹಿತಿ ನೀಡಿದರು.ತೋಟಗಾರಿಕಾ ಸಹಾಯಕ ನಿರ್ಧೆಶಕ ಸತೀಶ ಹೆಗಡೆ ಮಾಹಿತಿ ನೀಡಿ, ಅಡಿಕೆಗೆ ಕೊಳೆ ಪ್ರಾರಂಭವಾಗಿದ್ದು, ಇದು 52 ಹೆಕ್ಟೇರದಲ್ಲಿ ವ್ಯಾಪಿಸಿದೆ.ಔಷಧಿ ಸಿಂಪಡಿಸುವ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಚಿವರು ಸೂಚಿಸಿದರು.
ಬಿಇಒ ಎನ್.ಆರ್.ಹೆಗಡೆ ಮಾತನಾಡಿ,45 ಶಾಲೆಗಳಿಗೆ ಭಾಗಶ; ಹಾನಿಯಾಗಿದೆ ಎಂದಾಗ ಸಚಿವರು ಮಧ್ಯಪ್ರವೇಶಿಸಿ,ಗೋಡೆ ಮೆಲ್ಛಾವಣಿ ಕುಸಿಯುವಂತಹ ಕಟ್ಟಡದಲ್ಲಿ ಮಕ್ಕಳನ್ನು ಕೂಡ್ರಿಸಬೇಡಿ ಎಂದು ಸಚಿವರು ಸೂಚಿಸಿದರು.ತಾಲೂಕಿನಲ್ಲಿ 19 ಅಂಗನವಾಡಿಗಳಿಗೆ ಭಾಗಶ; ಹಾನಿಯಾಗಿದೆ ಎಂದು ಸಿಡಿಪಿಒ ರಫಿಕಾ ಹಳ್ಳೂರು ತಿಳಿಸಿದರು.
ಅಂಗನವಾಡಿ ಕಟ್ಟಡ ಹಾನಿಯ ಬಗ್ಗೆ ವಾರದೊಳಗೆ ಪರಿಶೀಲಿಸಿ,ತುರ್ತುಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.ನೊಡೆಲ್ ಅಧಿಕಾರಿಗಳು ಪ್ರ ತಿ ಗ್ರಾ.ಪಂ ಮಟ್ಟದ ಹಾನಿ ಮಾಹಿತಿ ಇರಬೇಕು.
ಸಾರಿಗೆ ಸಾಕಷ್ಟು ಸಮಸ್ಯೆ ಗಳಿದ್ದರೂ,ಅಧಿಕಾರಿಗಳೂ ಬರಲಿಲ್ಲ ಸಮಸ್ಯೆಗಳಿಗೂ ಸ್ಪಂದನೆ ಇಲ್ಲ ಜನಪ್ರತಿನಿಧಿಗಳು ದೂರಿದರು. ಆಗ ಬಸ್ ಇದೆ.ಸಿಬ್ಬಂದ್ದಿ ಕೊರತೆ ಇದೆ ಎಂದು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ ಹೇಳಿದರು.
“ಸರಕಾರಿ ಅಧಿಕಾರಿಗಳಿಗೆ ಮಳೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರಜೆ ಇಲ್ಲ. ನೊಡೆಲ್ ಅಧಿಕಾರಿಗಳು 24 ಗಂಟೆ ಜಾಗ್ರತಿ ವಹಿಸಿ, ಕಾರ್ಯ ನಿರ್ವಹಿಸಿ ಎಂದು ಸಚಿವ ಕೊಟ ಶ್ರೀನಿವಾಸ ಪೂಜಾರಿ ಸೂಚಿಸಿದರು.”
ಹೆಸ್ಕಾಂನ ವಿನಾಯಕ ಪೇಟಕರ್ ಮಾಹಿತಿ ನೀಡಿ,ತಾಲೂಕಿನಲ್ಲಿ 836 ಕಂಬಗಳಿಗೆ ಹಾನಿಯಾಗಿದೆ.60 ಟಿಸಿ ಗಳಿಗೆ ಹಾನಿಯಾಗಿದೆ.ಕಂಬ ಪುನ; ಸ್ಥಾಪಿಸಲಾಗಿದೆ ಎಂದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ,”ಮಳೆ ಹಾನಿಯ ಅಂದಾಜು ಮಾಡುವಾಗ ಮಾನವೀಯ ನೆಲೆಯಲ್ಲಿ ಸ್ವಲ್ಪ ಉದಾರ ಮನೋಭಾವ ತೋರಬೇಕು. ಶಾಲೆಯ ಬಿದ್ದು ಮಕ್ಕಳಿಗೆ ಹಾನಿ ಆದರೆ ಬಿಇಒ ಪಿಡಿಒ ಗಳೇ ಹೋಣೆ.ಅಪಾಯ ಆಗುವ ಸಂಭವನೀಯತೆ ಇದ್ದರೆ,ಬೇರೆ ಕಟ್ಟಡದಲ್ಲಿ ಮಕ್ಕಳನ್ನು ಸ್ಥಳಾಂತರಿ.ರಿಸ್ಕ ತೆಗೆದು ಕೊಳ್ಳಲು ಹೋಗಬೇಡಿ” ಎಂದು ಸೂಚಿಸಿದರು.
ಎಲ್ಲ ಇಲಾಖೆಯ ಅಭಿವೃದ್ದಿ ಕೆಲಸಗಳಿಗೆ ಸರಕಾರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ಎರಡು ತಿಂಗಳ ಒಳಗೆ ಟೆಂಡರ್ ಮುಗಿದು ಕೆಲಸ ಆರಂಭಕ್ಜೆ ಸಿದ್ದವಾಗಿರಬೇಕು. ಚುನಾವಣಾ ವರ್ಷವಾಗಿದ್ದು,ಕೊಟ್ಟ ಹಣ ಸದ್ವಿನಿಯೋಗ ಆಗಬೇಕು.ಅಧಿಕಾರಿಗಳು ಎಚ್ಚರಿಕೆಯಿಂದ ತ್ವರಿತವಾಗಿ ಸವಾಲು ಸ್ವೀಕರಿಸಿ ಕೆಲಸ ಮಾಡಿ.ಯಾವುದೇ ಸಬೂಬು ಹೇಳುವುದು ಬೇಡ ಎಂದು ಅಧಿಕಾರಿಗಳಿಗೆ ಹೆಬ್ಬಾರ ತಾಕೀತು ಮಾಡಿದರು.
ವಾಸ್ತವಿಕತೆ ನೋಡಿ ಅಧಿಕಾರಿಗಳು ಕೆಲಸ ಮಾಡಿ.ಅಂಗನವಾಡಿ, ಶಾಲೆ ಗಳ ಹಾನಿಗೆ ತಲಾ 2 ಲಕ್ಷರೂ ದಲ್ಲಿ ಕೆಲಸ ಮಾಡಲು ಅವಕಾಶ ಇದೆ ಹೆಬ್ಬಾರ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ,ಸಹಾಯಕ ಆಯುಕ್ತ ಆರ್.ದೇವರಾಜ್,ಡಿಎಫ್ ಒ ಎಸ್.ಜಿ.ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್,ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ,ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳು,ಜನಪ್ರನಿಧಿಗಳು ಭಾಗವಹಿಸಿದ್ದರು.