Slide
Slide
Slide
previous arrow
next arrow

ಕಾಲೇಜಿಗೆ ಹೋಗುವುದಾಗಿ ತೆರಳಿದ ವಿದ್ಯಾರ್ಥಿ ನಾಪತ್ತೆ

300x250 AD

ಕುಮಟಾ: ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೊಗದೇ ವಾಪಸ್ಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಪಟ್ಟಣದ ಗಾಂಧಿನಗರದ ನಿವಾಸಿ, ಎಸ್ ಡಿ ಎಮ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗದಲ್ಲಿದ್ದ ಗಣೇಶ ರತ್ನಾಕರ ಶೇಟ್ ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದಾನೆ.

ಈತನು ಸೋಮವಾರ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು ಸಂಜೆಯಾದರು ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಿತರಾದ ಪಾಲಕರು ಓದುತ್ತಿದ್ದ ಕಾಲೇಜಿಗೆ ಹೋಗಿ ಕಾಲೇಜಿನಲ್ಲಿ ಹುಡುಕಾಡಿ ವಿಚಾರಿಸಿದ್ದರು. ಆದರೆ ಇತನ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಎಸ್.ಡಿ. ಎಮ್ ಕಾಲೇಜಿನ ಪ್ರಿನ್ಸಿಪಾಲರು ಹಾಗೂ ಉಪನ್ಯಾಸಕರಲ್ಲಿ ಪಾಲಕರು ಮಗನ ಬಗ್ಗೆ ಕೇಳಿದ್ದರು. ಆದರೆ ಸೋಮವಾರ ಕಾಲೇಜಿಗೆ ಬಂದಿಲ್ಲವಾಗಿ ಕಾಲೇಜಿನ ಪ್ರಿನ್ಸಿಪಾಲರು ತಿಳಿಸಿದ್ದರು.

300x250 AD

ಇದರಿಂದ ಪುನಃ ಆತಂಕ್ಕೊಳಗಾದ ಕುಟುಂಬಸ್ಥರು ಹೊನ್ನಾವರದ ಹಾಗೂ ದೂರದ ಸಂಬಂಧಿಕರ ಮನೆಗಳಲ್ಲಿ ಹಾಗೂ ಮಗನ ಸ್ನೇಹಿತರ ಮನೆಯಲ್ಲಿ ಕೇಳಿ ವಿಚಾರಿಸಿ, ಹುಡುಕಾಡಿದ್ದಾರೆ. ಆದರು ಮಗನ ಬರುವಿಕೆ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ, ಯಾರೋ ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನಲೆ ಗಣೇಶ ಅವರ ತಂದೆ ರತ್ನಾಕರ ಶೇಟ್, ಮಂಗಳವಾರ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮಗನ ಹುಡುಕಿಕೊಡಲು ವಿನಂತಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿ ಪತ್ತೆಗೆ ಮುಂದಾಗಿದ್ದಾರೆ.

Share This
300x250 AD
300x250 AD
300x250 AD
Back to top