• Slide
    Slide
    Slide
    previous arrow
    next arrow
  • ಭಾರತ ವಿಶ್ವಗುರುವಾಗುವಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರ ಪಾತ್ರವೂ ಬಹು ಮುಖ್ಯ:ಡಾ.ಎಂ.ಬಿ ದಳಪತಿ

    300x250 AD

    ಶಿರಸಿ: ಭಾರತ ಹಳ್ಳಿಗಳಿಂದ ಕೂಡಿರುವ ಸುಸಂಸ್ಕೃತ ದೇಶವಾಗಿದೆ. ನಮ್ಮ ದೇಶ ವಿಶ್ವಗುರು ಆಗುವ ನಿಟ್ಟಿನಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರು ಹಳ್ಳಿಗಳಲ್ಲಿ ಸೇವೆ ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಎಂ.ಬಿ ದಳಪತಿ ಹೇಳಿದರು.

     ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ,  ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ವಿಭಾಗ ಮತ್ತು ಜಿಲ್ಲಾ ನೋಡಲ್‌ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ಅಧಿಕಾರಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

     ಉತ್ತರ ಕನ್ನಡ ನಿಸರ್ಗ ಸೌಂದರ್ಯದಿಂದ ಸಂಪನ್ನವಾಗಿದೆ. ಇಲ್ಲಿ ಎನ್ ಎಸ್ ಎಸ್ ಮೌಲ್ಯಯುತ ಸಾಮಾಜಿಕ ಕಾರ್ಯ ಮಾಡಲು ಅನುಕೂಲಕರ ವಾತಾವರಣ ಇದೆ.ಎನ್ ಎಸ್ ಎಸ್ ಅಧಿಕಾರಿಗಳು ಸಾಮಾಜಿಕ ಜವಾಬ್ಧಾರಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

    300x250 AD

    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಮಾತನಾಡಿ ಮಾನವ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ನಾವು  ಯೋಚನಾ ಶಕ್ತಿಯನ್ನು ಹೊಂದಿದ್ದೇವೆ.ಇದೇ ನಮ್ಮನ್ನು ಬುದ್ದಿವಂತನಾಗಿಸಿದೆ. ನಮ್ಮ ಧರ್ಮ,ಭಾಷೆ, ಸಂಪ್ರದಾಯಗಳು ಬೇರೆ ಬೇರೆ ಆಗಿದ್ದರೂ ನಾವೆಲ್ಲ ಭಾರತೀಯರು. ನಮ್ಮ ದೇಶದ ರಾಷ್ಟ್ರೀಯ ಸಮಸ್ಯೆಗಳಾದ ಅನಕ್ಷರತೆ,ಬಾಲ್ಯ ವಿವಾಹ, ಬಡತನ, ನಿರುದ್ಯೋಗಗಳನ್ನು ತೊಡೆದು ಹಾಕಲು ಎನ್ ಎಸ್ ಎಸ್ ಪ್ರಯತ್ನಿಸಬೇಕು. ಸ್ವಚ್ಚತೆಯ ಕೊರತೆ ಸ್ವಚ್ಚ ಭಾರತ ಅಭಿಯಾನಕ್ಕೆ ಕಾರಣ. ಸ್ವಚ್ಚತೆ ನಮ್ಮ ಧ್ಯೇಯವಾಗಬೇಕು,ಈ ಕುರಿತು ಜಾಗೃತಿ ಮೂಡಿಸುವ ಕೆಲಸ‌ ಮಾಡಬೇಕು.ನಾವೆಲ್ಲರೂ ಸೇರಿ ಉತ್ತಮ ಎನ್ ಎಸ್ ಎಸ್ ಸ್ವಯಂ ಸೇವಕರನ್ನು ತಯಾರು ಮಾಡಬೇಕು ಈ ನಿಟ್ಟಿನಲ್ಲಿ ಕಾರ್ಯಾಗಾರ ಯಶಸ್ವಿಯಾಗಲಿ ಎಂದರು.

     ಹುಬ್ಬಳ್ಳಿಯ ಜೈನ ಪದವಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಡಾ ಎಂ ಎಸ್ ಹುಲಿಗಾರ್ ಎಲ್ಲಾ ಎನ್ ಎಸ್ ಎಸ್ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ತರಬೇತಿ ನೀಡಿದರು. ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ ಜಿ ಟಿ ಭಟ್ ಪ್ರಾಸ್ಥಾವಿಸಿ ಪರಿಚಯಿಸಿದರು. ಡಾ ಆರ್ ಆರ್ ಹೆಗಡೆ ಸ್ವಾಗತಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top