• Slide
    Slide
    Slide
    previous arrow
    next arrow
  • ವೀರಶೈವ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

    300x250 AD

    ಹಳಿಯಾಳ: ನಗರದ ವೀರಶೈವ ಸಮಾಜದ ನೂತನ ಅಧ್ಯಕ್ಷರಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿರುವ ಬಸವರಾಜ ಕಲಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    ಸ್ಥಳೀಯ ಕೋಗಿನಬನದಲ್ಲಿರುವ ಶ್ರೀಮೃತ್ಯುಂಜಯ ಮಠದಲ್ಲಿ ನಡೆದ ಸಭೆಯಲ್ಲಿ ಸಮಾಜದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆಯಿತು. ವೀರಶೈವ ಸಮಾಜದ ನಿಕಟಪೂರ್ವ ಅಧ್ಯಕ್ಷ ಎಸ್. ಎಂ.ಪಾಟೀಲ, ಕಾರ್ಯದರ್ಶಿ ನಂದೀಶ್ ಮುಂಗರವಾಡಿ, ಸಮಾಜದ ಹಿರಿಯರಾದ ಪುಂಡಲೀಕ ಅಂಕಲಗಿ, ಸಿ. ಎಸ್. ವಸ್ತ್ರದ್, ಅಶೋಕ ಪಾಟೀಲ, ಶಿವಪುತ್ರಪ್ಪ ಹೊರಪ್ಯಾಟಿ, ಯು.ಎಸ್. ಪಾಟೀಲ, ಎಸ್.ಎಸ್. ಪೂಜಾರ ಮೊದಲಾದವರ ಉಪಸ್ಥಿತಿಯಲ್ಲಿ ಬಸವರಾಜ ಕಲಶೆಟ್ಟಿಯವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

    300x250 AD

    ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎಸ್. ಎಂ.ಪಾಟೀಲ, ನಿಕಟಪೂರ್ವ ಕಾರ್ಯದರ್ಶಿ ನಂದೀಶ್ ಮುಂಗವಾಡಿ, ನೂತನ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ನಂಜುಂಡಪ್ಪ, ಜಿ.ಉಮೇಶ, ಮಹಾದೇವ ಅಂದಕಾರ, ಸಿದ್ದಪ್ಪ ಕುರಗುಂಡ, ಗುಬ್ಬಿಯವರ, ಎಸ್. ಎನ್. ಪಾಟೀಲ, ಗುರು ಮಠಪತಿ, ಚಂದ್ರು ಮಾಳಿ, ಶಿವಬಸಪ್ಪ ನರೇಗಲ್, ಮೃತ್ಯುಂಜಯ ಮುರುಗೋಡ, ಚೆನ್ನಬಸಪ್ಪಯ್ಯ ಮುರುಗೋಡ, ರಾಜಶೇಖರ ಪಾಟೀಲ ಮೊದಲಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top