• Slide
  Slide
  Slide
  previous arrow
  next arrow
 • ವಿಠಲದಾಸ ಕಾಮತ್’ಗೆ ಡಾ. ಪಾಟೀಲ್‌ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ

  300x250 AD

  ಕಾರವಾರ: ಧಾರವಾಡದ ಸಾಧನಾ ಸಂಸ್ಥೆ ನೀಡುವ ಡಾ. ಪಾಟೀಲ್‌ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ- 2022 ಗೆ ಪತ್ರಕರ್ತ ವಿಠಲದಾಸ ಕಾಮತ್ ಆಯ್ಕೆಯಾಗಿದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ಇವರ ಜೀವಮಾನದ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  ಜು. 22 ರಂದು ಬೆಳಿಗ್ಗೆ 10.30 ಗಂಟೆಗೆ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಸಾಹಿತ್ಯ ಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು, ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ, ಬದುಕು, ಬರಹ ಗಮನಿಸಿ ಆಯ್ಕೆ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಮತ್ತು ಸಂಸ್ಥಾಪಕಿ, ಪ್ರಧಾನ ಕಾರ್ಯದರ್ಶಿ ಡಾ. ಇಸಬೆಲಾ ಝೇವಿಯರ್ ತಿಳಿಸಿದ್ದಾರೆ.

  ಕಳೆದ ಮೂರು ದಶಕಗಳಿಂದ ಪತ್ರಿಕಾ ಕ್ಷೇತ್ರದಲ್ಲಿರುವ ವಿಠಲದಾಸ ಕಾಮತ್ ಪ್ರಸ್ತುತ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥರಾಗಿದ್ದಾರೆ. ಅಂಕೋಲಾ ಪತ್ರಕರ್ತರ ಸಂಘಕ್ಕೆ ಎರಡು ಬಾರಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎರಡನೇ ಬಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ, ಭಟ್ಕಳ ಪತ್ರಕರ್ತರು ನೀಡುವ ಭಟ್ಟಾಕಳಂಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  300x250 AD

  Share This
  300x250 AD
  300x250 AD
  300x250 AD
  Leaderboard Ad
  Back to top