• Slide
    Slide
    Slide
    previous arrow
    next arrow
  • ಗ್ರಂಥಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್:ತಪ್ಪಿದ ಭಾರೀ ಅನಾಹುತ

    300x250 AD

    ಹೊನ್ನಾವರ: ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಕಂಪ್ಯೂಟರ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿದೆ. ಬುಧವಾರ ಮಧ್ಯಾಹ್ನ ಸಮಯದಲ್ಲಿ ಏಕಾಏಕಿ ಗ್ರಂಥಾಲಯದ ಒಳಗಡೆ ದಟ್ಟ ಹೊಗೆಯು ಕಾಣಿಸಿಕೊಂಡಾಗ ಸಮೀಪದಲ್ಲೆ ಇರುವ ಪಟ್ಟಣ ಪಂಚಾಯತಿ, ಸಿಬ್ಬಂದಿ ಯೋಗೀಶ ಇವರು ಹತ್ತಿರ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ತನ್ನ ಇಲಾಖೆಯ ಇತರೆ ಸಿಬ್ಬಂದಿಯ ಜೊತೆಗೂಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.ಬಾಗಿಲು ಮುರಿದು ಒಳಪ್ರವೇಶಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅವಘಡ ಸಂಭವಿಸುದನ್ನು ತಡೆದಿದ್ದಾರೆ. 2 ಕಂಪ್ಯೂಟರ್, ಕುರ್ಚಿ ಮೇಜು, ಫ್ಯಾನ್ ಹಾಗೂ ಸದಸ್ಯತ್ವದ ಕಾರ್ಡ ಸುಟ್ಟು ಕರಕಲಾಗಿದ್ದು, ಪುಸ್ತಕಗಳು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top